ಲಕ್ನೋ: ಹುತಾತ್ಮ ಯೋಧನ ತಾಯಿಯ ರೋಧನೆ ನಡುವೆ ಉತ್ತರ ಪ್ರದೇಶದ (Uttar Pradesh) ಇಬ್ಬರು ರಾಜಕಾರಣಿಗಳು ಫೋಟೋಗಾಗಿ ಪೋಸ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಉತ್ತರ ಪ್ರದೇಶ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ (BJP) ಶಾಸಕ ಜಿಎಸ್ ಧರ್ಮೇಶ್ ಅವರು ಹುತಾತ್ಮರಾದ ಕ್ಯಾಪ್ಟನ್ ಶುಭಂ ಗುಪ್ತಾ ಅವರ ತಾಯಿಗೆ ಚೆಕ್ ಹಸ್ತಾಂತರಿಸುವಾಗ ಫೋಟೋಗೆ ಪೋಸ್ ನೀಡಿದ್ದಾರೆ. ಈ ವೇಳೆ ಗುಪ್ತಾ ಅವರ ತಾಯಿ ಇದನ್ನು ಪ್ರದರ್ಶನಕ್ಕೆ ಇಡಬೇಡಿ ಎಂದು ರೋಧಿಸಿದ್ದಾರೆ. ಸಚಿವ ಹಾಗೂ ಶಾಸಕರ ನಡೆಗೆ ಕಾಂಗ್ರೆಸ್, ಎಎಪಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಾಯಿ-ಮಗು ಸಜೀವ ದಹನಕ್ಕೆ ದೃಶ್ಯಸಾಕ್ಷ್ಯದ ಬೆನ್ನಲ್ಲೇ ಹೆಲ್ಪ್‌ಲೈನ್
The B in BJP should stand for Besharm and P for Publicity.
Captain Shubham Gupta made the ultimate sacrifice in the line of duty during an encounter in the Rajouri sector. His mother is grieving and eagerly awaiting her son’s mortal remains. In the midst of her inconsolable… pic.twitter.com/IXUX0a3Iu1
— Raghav Chadha (@raghav_chadha) November 24, 2023
ಜಮ್ಮು ಮತ್ತು ಕಾಶ್ಮೀರ (Jammu and Kashmir) ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡುವಾಗ ಐವರು ಯೋಧರು ಹುತಾತ್ಮರಾಗಿದ್ದರು. ಅದರಲ್ಲಿ ಉತ್ತರ ಪ್ರದೇಶದ ಕ್ಯಾಪ್ಟನ್ ಶುಭಂ ಗುಪ್ತಾ ಅವರು ಸಹ ಸೇರಿದ್ದಾರೆ. ಹುತಾತ್ಮರಾದ ಗುಪ್ತಾ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದು, 50 ಲಕ್ಷ ರೂ. ಪರಿಹಾರ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದರು. ಪರಿಹಾರದ ಚೆಕ್‍ನ್ನು ಸಚಿವರು ವಿತರಿಸುವಾಗ ಫೋಟೋಗೆ ಪೋಸ್ ಕೊಟ್ಟಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ವೀಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ (Congress) `ರಣಹದ್ದುಗಳು’ ಎಂದು ಟೀಕಿಸಿದೆ. ಉಗ್ರರೊಂದಿಗೆ ಹೋರಾಡುವಾಗ, ಕ್ಯಾಪ್ಟನ್ ಎಂವಿ ಪ್ರಾಂಜಲ್, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಶ್ತ್ ಮತ್ತು ಪ್ಯಾರಾಟ್ರೂಪರ್ ಸಚಿನ್ ಲಾರ್ ಹುತಾತ್ಮರಾಗಿದ್ದರು. ಐಇಡಿ ತಜ್ಞ ಮತ್ತು ತರಬೇತಿ ಪಡೆದ ಸ್ನೈಪರ್ ಆಗಿದ್ದ ಹಿರಿಯ ಕಮಾಂಡರ್ ಸೇರಿದಂತೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಸಹ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್- ಭಾರತದಲ್ಲಿ ಹೈಅಲರ್ಟ್