ನವದೆಹಲಿ: ಕೊರೋನಾಜನಕ ಚೀನಾದಲ್ಲಿ (China) ಮತ್ತೊಂದು ಡೆಡ್ಲಿ ವೈರಸ್ ಶುರುವಾಗಿದ್ದು, ಇತ್ತ ಕೇಂದ್ರ ಆರೋಗ್ಯ ಇಲಾಖೆಯು (Central Health Department) ಭಾರತದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಚೀನಾದಲ್ಲಿ ಶಾಲೆಗೆ ತೆರಳ್ತಿರುವ ಮಕ್ಕಳಿಗೆ ಹೊಸ ವೈರಸ್ ಕಂಟಕವಾಗ್ತಿದೆ. ನ್ಯೂಮೋನಿಯಾ (Pneumonia) ಮಾದರಿಯ ಲಕ್ಷಣಗಳಿಂದ ದೊಡ್ಡ ಮಟ್ಟದಲ್ಲಿ ಮಕ್ಕಳು ಅನಾರೋಗ್ಯಕ್ಕೆ ಗುರಿ ಆಗ್ತಿದ್ದಾರೆ. ನೇರ ಶ್ವಾಸಕೋಶಕ್ಕೆ ವೈರಸ್ ಅಟ್ಯಾಕ್ ಆಗುತ್ತದೆ. ಇದರಿಂದ ಮಕ್ಕಳು ಉಸಿರಾಟದ ಸಮಸ್ಯೆಯಿಂದ ಬಳಲ್ತಿದ್ದಾರೆ. ಹೀಗಾಗಿ ಚೀನಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೀನಾ ಆಸ್ಪತ್ರೆಗಳಲ್ಲಿ ಸೋಂಕಿತರೇ ತುಂಬಿದ್ದಾರೆ.
Advertisement
Advertisement
ಇದು ವಿಶ್ವದ ಕಳವಳಕ್ಕೆ ಕಾರಣವಾಗಿದೆ. ಇದು ಕೊರೋನಾದಂತೆ ಹಬ್ಬಿದ್ರೆ ಏನು ಗತಿ ಎಂಬ ಆತಂಕ ಶುರುವಾಗಿದೆ. ಈ ಬಗ್ಗೆ ಭಾರತ ಸರ್ಕಾರ ಸ್ಪಂದಿಸಿದೆ. ಶ್ವಾಸಕೋಶ ಸಮಸ್ಯೆಗೆ ಸಂಬಂಧಿಸಿದ ವರದಿಗಳನ್ನು ಪರಿಶೀಲಿಸಲಾಗ್ತಿದೆ. ಚೀನಾದಲ್ಲಿ ವರದಿ ಆಗ್ತಿರುವ ಶ್ವಾಸಕೋಶ ಸೋಂಕು, ಎವಿಎನ್ ಇನ್‍ಫ್ಲೂಯೆಂಜಾಗಳಿಂದ ಭಾರತಕ್ಕೆ (India) ಅಪಾಯ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
Advertisement
ಮಕ್ಕಳ ಶ್ವಾಸಕೋಶ ಅನಾರೋಗ್ಯಕ್ಕೆ ಸಂಬಂಧಿಸಿ ಸಾಧಾರಣ ಕಾರಣಗಳೇ ಗೋಚರಿಸ್ತಿವೆ. ನಿಗೂಢ ವ್ಯಾಧಿ, ಅಸಾಧಾರಣ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಎಂತಹ ತುರ್ತು ಪರಿಸ್ಥಿತಿಯನ್ನಾದ್ರೂ ಎದುರಿಸಲು ಸರ್ಕಾರ ರೆಡಿ ಇದೆ ಎಂದು ಸ್ಪಷ್ಟಪಡಿಸಿದೆ.