ಲಕ್ನೋ: ವ್ಯಕ್ತಿಯೊಬ್ಬ ಮದುವೆಯಾದ ಎರಡೇ ಗಂಟೆಯಲ್ಲಿ ಪತ್ನಿಗೆ ತಲಾಖ್ (Talaq) ನೀಡಿದ ಪ್ರಕರಣ ಉತ್ತರಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ನಡೆದಿದೆ. ವರದಕ್ಷಿಣೆ (Dowry) ವಿಚಾರವಾಗಿ ತಲಾಖ್ ನೀಡಿರುವ ಮಾಹಿತಿ ತಿಳಿದು ಬಂದಿದೆ.
ಈ ಬಗ್ಗೆ ವಧುವಿನ ಸಹೋದರ ಕಮ್ರಾನ್ ವಾಸಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಇಬ್ಬರು ಸಹೋದರಿಯರನ್ನು ಆಗ್ರಾದ ಫತೇಹಾಬಾದ್‍ನಲ್ಲಿ ಒಂದೇ ದಿನ ಮದುವೆ ಮಾಡಲಾಯಿತು. ಈ ವೇಳೆ ಒಬ್ಬಳು ಸಹೋದರಿ ತನ್ನ ಪತಿಯೊಂದಿಗೆ ತೆರಳಿದ್ದಾಳೆ. ಆದರೆ ಮತ್ತೊಬ್ಬಳು ಪತಿ ಮೊಹಮ್ಮದ್ ಆಸಿಫ್ ವರದಕ್ಷಿಣೆಯ ಕಾರಿಗಾಗಿ ಗಲಾಟೆ ತೆಗೆದಿದ್ದಾನೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಆರೋಪ – ಎಸ್ಪಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
Advertisement
Advertisement
ಅಲ್ಲದೇ ಅವನ ಕುಟುಂಬ ಸಹ ಈಕೆಯ ಪೋಷಕರು ಆಸಿಫ್‍ಗೆ ಕಾರು ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಸ್ಥಳದಲ್ಲೇ ಕಾರು ಕೊಡಿಸಿ ಇಲ್ಲವೇ 5 ಲಕ್ಷ ರೂಪಾಯಿ ನೀಡಬೇಕು ಎಂದು ಗಲಾಟೆ ಮಾಡಿದ್ದಾರೆ. ಇದಕ್ಕೆ ಹೆಣ್ಣಿನ ಕುಟುಂಬದವರು ಅಲ್ಪಾವಧಿಯಲ್ಲಿ ಹಣದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ಆಸಿಫ್ ತಲಾಖ್ ನೀಡಿ ತೆರಳಿದ್ದಾನೆ
Advertisement
ಈ ಸಂಬಂಧ ಕಮ್ರಾನ್ ವಾಸಿ ದೂರು ದಾಖಲಿಸಿದ್ದಾರೆ. ಆಸಿಫ್ ಮತ್ತು ಇತರ 6 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಎಫ್‍ಐಆರ್‍ನಲ್ಲಿ ಹೆಸರಿಸಿರುವ 7 ಮಂದಿಯನ್ನು ಬಂಧಿಸಬೇಕು ಎಂದು ಕಮ್ರಾನ್ ಆಗ್ರಹಿಸಿದ್ದಾರೆ.
Advertisement
ತಲಾಖ್ ಹೇಳುವ ಮೂಲಕ ಮಹಿಳೆಗೆ ವಿಚ್ಛೇದನ (Divorce) ನೀಡುವುದು ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯಿದೆ 2019ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಮರು ತನಿಖೆ – ಎಸ್ಪಿ ಶರತ್ ಹೆಸರು ಕೈಬಿಟ್ಟ ಸರ್ಕಾರ
Web Stories