ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಬಜರಂಗ ಮುನಿ ಅರೆಸ್ಟ್‌

Public TV
1 Min Read
bajrang muni das

ಲಕ್ನೋ: ಉತ್ತರ ಪ್ರದೇಶದಲ್ಲಿ ಪ್ರಚಾರದ ವೇಳೆ ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಬಜರಂಗ ಮುನಿಯನ್ನು 11 ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ.

ಖೈರಾಬಾದ್‌ನಲ್ಲಿರುವ ಮಹರ್ಷಿ ಶ್ರೀಲಕ್ಷ್ಮಣ್ ದಾಸ್ ಉದಾಸಿನ್ ಆಶ್ರಮದ ಮುಖ್ಯಸ್ಥ ಬಜರಂಗ ಮುನಿ ದಾಸ್‌ನನ್ನು ಪೊಲೀಸರು ಹಿಡಿದಿದ್ದಾರೆ. ಇದನ್ನೂ ಓದಿ: ಅಪಹರಿಸಿ, ಸಾರ್ವಜನಿಕವಾಗಿ ಅತ್ಯಾಚಾರ ಮಾಡ್ತೀನಿ: ಮುಸ್ಲಿಂ ಮಹಿಳೆಯರಿಗೆ ಸ್ವಾಮೀಜಿ ಬೆದರಿಕೆ

arrested new

ಎಪ್ರಿಲ್ 2 ರಂದು ಮುನಿ ತನ್ನ ಭಾಷಣದ ಎರಡು ನಿಮಿಷಗಳ ವೀಡಿಯೋದಲ್ಲಿ, ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಮಾಡುವ ಬೆದರಿಕೆ ಒಡ್ಡಿದ ಮಾತುಗಳನ್ನಾಡಿದ್ದರು.

ಬಜರಂಗ ಮುನಿ ವಿವಾದಿತ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮುನಿ ಬಂಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಒತ್ತಾಯದ ಮಾತುಗಳು ಕೇಳಿಬಂದಿದ್ದವು. ಇದನ್ನೂ ಓದಿ: ಔಷಧಿ ಘಟಕದಲ್ಲಿ ಅಗ್ನಿ ದುರಂತ: 6 ಮಂದಿ ಸಾವು

POLICE JEEP

ನಂತರ ಪೊಲೀಸರು ಬಜರಂಗ ಮುನಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ದ್ವೇಷ ಭಾಷಣ, ಅವಹೇಳನಕಾರಿ ಹೇಳಿಕೆಗಳು ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಾದ ಬೆನ್ನಲ್ಲೇ ಬಜರಂಗ ಮುನಿ ತನ್ನ ಹೇಳಿಕೆಗೆ ಕ್ಷಮೆಯಾಚಿಸಿರುವ ವೀಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ. ʻನನ್ನ ಹೇಳಿಕೆಯನ್ನು ತಪ್ಪಾಗಿ ಪ್ರಸ್ತುತ ಪಡಿಸಲಾಗಿದೆ. ನಾನು ಆ ಬಗ್ಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆʼ ಎಂದು ಮುನಿ ಕ್ಷಮೆಯಾಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *