ನವದೆಹಲಿ: ಟಿವಿಯಲ್ಲಿ ಬೈಕ್ ರೇಸ್ ವೀಕ್ಷಣೆ ಮಾಡುವ ರೇಸ್ ಪ್ರಿಯರಿಗೆ ಸಿಹಿ ಸುದ್ದಿ. ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ವರ್ಷ ಭಾರತದಲ್ಲೇ (India) ಮೋಟೋಜಿಪಿ ರೇಸ್ (MotoGP Race) ನೋಡಬಹುದು.
ಹೌದು. ಮೋಟೋಜಿಪಿ ರೇಸ್ ಭಾರತಲ್ಲಿ ನಡೆಯುವ ಸಾಧ್ಯತೆಯಿದೆ. ಉತ್ತರ ಪ್ರದೇಶ (Uttar Pradesh) ಸರ್ಕಾರ ಮೋಟಾರ್ ಸ್ಪೋರ್ಟ್ ಈವೆಂಟ್ ಮತ್ತು ಸಲಹಾ ಕಂಪನಿಯಾದ ಎವಿಡಬ್ಲ್ಯೂ ಗ್ಲೋಬಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ 2027 ರಲ್ಲಿ ನೋಯ್ಡಾದಲ್ಲಿರುವ ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ(Buddh International Circuit) ರೇಸ್ ನಡೆಯುವ ಸಾಧ್ಯತೆಯಿದೆ. ಮೋಟೋಜಿಪಿ ಜೊತೆಗೆ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್ ಬುದ್ಧ ಸರ್ಕ್ಯೂಟ್‌ಗೆ ಮರಳುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ವಿಶ್ವಕಪ್‌ನಿಂದ ಶ್ರೀಲಂಕಾ ಔಟ್ – ನ್ಯೂಜಿಲೆಂಡ್ ಸೆಮಿ ಆಸೆ ಜೀವಂತ
2023 ರಲ್ಲಿ ಮೋಟೋಜಿಪಿ ಸ್ಪರ್ಧೆ ನಡೆದಿತ್ತು. ಆದರೆ ರೇಸ್ ಆಯೋಜಿಸಿದವರು ಬಾಕಿ ಹಣವನ್ನು ಪಾವತಿಸದೇ ಇರುವುದು, ಕಾರ್ಯಾಚರಣಾ ವೈಫಲ್ಯ, ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಮೋಟೋ ಜಿಪಿ ಭಾರತವನ್ನು ತೊರೆದಿತ್ತು.
ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ. 20 ಕೋಟಿಗೂ ಹೆಚ್ಚು ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದು ಮೋಟೋ ಜಿಪಿಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: Ranji Trophy Final- ರಾಜ್ಯದ ಅನೀಶ್‌ಗೆ ಡಿಚ್ಚಿ ಹೊಡೆದ ಜಮ್ಮು ಕಾಶ್ಮೀರದ ನಾಯಕ

