ಲಕ್ನೋ: ಕನ್ವರ್ ಯಾತ್ರೆಯ (Kanwar Yatra) ಮಾರ್ಗಗಳಲ್ಲಿ ಮುಕ್ತವಾಗಿ ಮಾಂಸ ಮಾರಾಟವನ್ನು ರದ್ದು ಮಾಡಲು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆಗಳನ್ನು ನೀಡಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂಬರುವ ಹಬ್ಬದ ಸೀಸನ್‌ಗೆ ಮುನ್ನ ಪೊಲೀಸ್ ಕಮಿಷನರ್, ವಿಭಾಗೀಯ ಕಮಿಷನರ್, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಈ ಸಂಬಂಧ ನಿರ್ದೇಶನಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ರಸ್ತೆಗಳಿಗೆ ಸಾವರ್ಕರ್, ವಾಜಪೇಯಿ ಹೆಸರು ಮರು ನಾಮಕರಣ
ಈ ಬಾರಿ ಅಧಿಕ ಶ್ರಾವಣ ಇರುವ ಕಾರಣಕ್ಕೆ 8 ಸೋಮವಾರಗಳು ಬರಲಿವೆ. ಶಿವಭಕ್ತರಿಗೆ ಶ್ರಾವಣ ಮಾಸ ಬಹಳ ಮುಖ್ಯ. ಈ ಅವಧಿಯಲ್ಲಿ ಶ್ರಾವಣಿ ಶಿವರಾತ್ರಿ, ನಾಗಪಂಚಮಿ, ರಕ್ಷಾಬಂಧನ ಹಬ್ಬಗಳನ್ನು ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಮುಕ್ತವಾಗಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದಿದ್ದಾರೆ.
ಪವಿತ್ರ ಮಾಸ ಶ್ರಾವಣದಲ್ಲಿ ಜುಲೈ 4ರಿಂದ ಸಾಂಪ್ರದಾಯಿಕ ಕನ್ವರ್ ಯಾತ್ರೆ ಆರಂಭವಾಗಲಿದ್ದು, ಇದಕ್ಕೂ ಮುನ್ನ ಜೂನ್ 29ರಂದು ಬಕ್ರಿದ್ ಆಚರಣೆಯಾಗಲಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ಬಾರಿ ಸೂಕ್ಷ್ಮವಾಗಿರುವುದು ಸ್ಪಷ್ಟ. ನಾವು ನಿರಂತರವಾಗಿ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ದರೋಡೆ ಕೇಸ್ – ಶಾ ವಿರುದ್ಧ ಕೇಜ್ರಿವಾಲ್ ಆಕ್ರೋಶ
ಭಕ್ತರ ನಂಬಿಕೆಯನ್ನು ಗೌರವಿಸಿ, ಕನ್ವರ್ ಮಾರ್ಗದಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಬಾರದು. ಮಾರ್ಗವನ್ನು ಸ್ವಚ್ಛವಾಗಿ ಮತ್ತು ನೈರ್ಮಲ್ಯದಿಂದ ಇಡಬೇಕು. ಬೀದಿದೀಪಗಳ ವ್ಯವಸ್ಥೆ ಮಾಡಬೇಕು, ಬಿಸಿ ವಾತಾವರಣ ಇರುವುದರಿಂದ ಕುಡಿಯುವ ನೀರಿನ ವ್ಯವಸ್ಥೆಯೂ ಆಗಬೇಕು ಎಂದು ಹೇಳಿದ್ದಾರೆ.
ಅಲ್ಲದೇ ಕನ್ವರ್ ಯಾತ್ರೆ ನಡೆಯುವ ಮಾರ್ಗಗಳಲ್ಲಿ ಸಿಸಿಟಿವಿ ಅಳವಡಿಸಲಬೇಕು, ಡೈವರ್‌ಗಳನ್ನು ನಿಯೋಜಿಸಬೇಕು, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕನ್ವರ್ ಕ್ಯಾಂಪ್‌ಗಳನ್ನು ಸ್ಥಾಪಿಸುವ ಸ್ಥಳಗಳನ್ನು ಮುಂಚಿತವಾಗಿ ಗುರುತಿಸಬೇಕು ಎಂದು ಸಿಎಂ ಆದೇಶಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]