ಲಕ್ನೋ: ವಿದ್ಯಾರ್ಥಿಗಳಿಗೆ ಸ್ಮಾರ್ಟ್‍ಫೋನ್ ಹಾಗೂ ಟ್ಯಾಬ್‍ಗಳನ್ನು ವಿತರಿಸುವ ಸರ್ಕಾರದ ಯೋಜನೆಗೆ ಸಮಾಜವಾದಿ ಪಕ್ಷ ಅಡ್ಡಿಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದರು.
ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಬಡವರ ಏಳಿಗೆಯನ್ನು ಬಯಸದ ಸಮಾಜವಾದಿ ಪಕ್ಷ ಟ್ಯಾಬ್ ಮತ್ತು ಸ್ಮಾರ್ಟ್‍ಫೋನ್‍ಗಳನ್ನು ವಿತರಿಸದಂತೆ ಚುನಾವಣಾ ಆಯೋಗಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಕೋರಿದೆ. ಇಂತಹ ಹಸ್ತಕ್ಷೇಪದಿಂದ ಬಿಜೆಪಿಗೆ ಹಿನ್ನಡೆಯಾಗದು. ಬಿಜೆಪಿ ಸರ್ಕಾರವು ಬಡವರ ಪರವಾಗಿದ್ದು, ಬಡವರ ಏಳಿಗೆಗಾಗಿ ಶ್ರಮಿಸುತ್ತದೆ ಎಂದ ಅವರು, ಮಾರ್ಚ್ 10 ರಿಂದ ಯುವಕರಿಗೆ 2 ಕೋಟಿ ಟ್ಯಾಬ್ ಮತ್ತು ಸ್ಮಾರ್ಟ್ ಫೋನ್ ವಿತರಿಸುತ್ತೇವೆ ಎಂದು ಘೋಷಿಸಿದರು.
Advertisement
Advertisement
ಈ ಹಿಂದೆ ಎಸ್‍ಪಿ ಹಾಗೂ ಬಿಎಸ್‍ಪಿ ಪಕ್ಷಗಳು ಅಧಿಕಾರದಲ್ಲಿದ್ದಾಗ ಜನರಿಗೆ ಭದ್ರತೆಯನ್ನು ನೀಡಲು ವಿಫಲವಾಗಿತ್ತು. ಆದರೆ ಬಿಜೆಪಿಯೂ ಅಧಿಕಾರಕ್ಕೆ ಬಂದ ನಂತರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕಿ ಜನರಿಗೆ ಸುರಕ್ಷಿತವಾದ ಆಡಳಿತ ನೀಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್ ನಾಯಕರಿಗೆ ಉಕ್ರೇನ್ ಅಧ್ಯಕ್ಷ ಕರೆ
Advertisement
Advertisement
ಬಿಜೆಪಿಯೂ ಪುನಃ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಒಬ್ಬರಿಗೂ ಉದ್ಯೋಗವನ್ನು ನೀಡುತ್ತೇವೆ. ಮುಂದಿನ 5 ವರ್ಷಗಳಲ್ಲಿ ಬಿಜೆಪಿಯೂ ಈ ಯೋಜನೆಯನ್ನು ಸಕಾರಗೊಳಿಸಲು ಶ್ರಮಿಸುತ್ತದೆ. ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ, ಸ್ವಂತ ಉದ್ಯೋಗ ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಕೇಂದ್ರ ಸಚಿವ ಭಗವಂತ ಖೂಬಾ ವಾಹನದ ಮೇಲೆ ಕಲ್ಲು ತೂರಾಟ