ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಯುಪಿ ಸಿಎಂ ಖಾತೆಯಲ್ಲಿ ಅನಿಮೆಟೆಡ್ ಚಿತ್ರಗಳನ್ನು ಹಾಕಲಾಗಿದೆ.
ಯುಪಿ ಸಿಎಂಒ ಎನ್ನುವ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಲಾಗಿದ್ದು, ಅನಿಮೆಟೆಡ್ ಚಿತ್ರದ ಕುರಿತು ಪೋಸ್ಟ್‌ಗಳನ್ನು ಹಾಕಲಾಗಿದೆ. ಜೊತೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ತೆಗೆದು ವ್ಯಂಗ್ಯ ಚಿತ್ರವನ್ನು ಟ್ವಿಟ್ಟರ್ ಡಿಪಿಯಾಗಿ ಬಳಸಲಾಗಿದೆ.
Uttar Pradesh Chief Minister Office’s Twitter account hacked. pic.twitter.com/aRQyM3dqEk
— ANI UP/Uttarakhand (@ANINewsUP) April 8, 2022
ಯುಪಿ ಸಿಎಂಒ ಅಧಿಕೃತ ಟ್ವಿಟ್ಟರ್ ಅನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿದ ನಂತರ, ಖಾತೆಯಿಂದ ಸುಮಾರು 400-500ಕ್ಕೂ ಹೆಚ್ಚು ಟ್ವೀಟ್‍ಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರನ್ನ ಮದುವೆಯಾದ್ರೆ SSK ಸಮಾಜದಿಂದ ಬಹಿಷ್ಕರಿಸಿ: ನಾಗೇಶ್
ಈ ಖಾತೆಯಲ್ಲಿ ಪ್ರಸ್ತುತ 4 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದೆ. ಸುಮಾರು 4 ಗಂಟೆಗಳ ನಂತರ ಟ್ವಿಟ್ಟರ್ ಖಾತೆಯ ಮೇಲೆ ಸಿಎಂ ಕಚೇರಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಹ್ಯಾಕರ್‌ಗಳು ಹಾಕಿದ್ದ ಪೋಸ್ಟ್‌ನ್ನು ಟ್ವೀಟ್‍ಗಳನ್ನು ತೆಗೆದುಹಾಕಲಾಗಿದೆ. ಜೊತೆಗೆ ಸೈಬರ್ ತಜ್ಞರಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಇದಾದ ಬಳಿಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುಪಿ ಸರ್ಕಾರ ಟ್ವೀಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಕಪಾಳಮೋಕ್ಷ ಘಟನೆಯ ನಂತರ 10 ವರ್ಷ ಆಸ್ಕರ್ ಪ್ರಶಸ್ತಿಯಿಂದ ಬ್ಯಾನ್ ಆದ ವಿಲ್ ಸ್ಮಿತ್