ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಯುಪಿ ಅಸ್ತ್ರ ಬಳಸಿ: ಸಿಎಂಗೆ ರೇಣುಕಾಚಾರ್ಯ ಮನವಿ

Public TV
4 Min Read
renukacharya 1

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ಹಿನ್ನೆಲೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಸಾರ್ವಜನಿಕರ ಆಸ್ತಿ, ಪಾಸ್ತಿ ಹಾಳು ಮಾಡುವಂತವರ ವಿರುದ್ಧ ಯುಪಿ ಅಸ್ತ್ರ ಬಳಸಬೇಕು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಕೈಗೊಂಡ ಕ್ರಮಕ್ಕೆ ಆ ರಾಜ್ಯದಲ್ಲಿ ಜನ ಜೈ, ಜೈ ಎನ್ನುತ್ತಿದ್ದಾರೆ. ಅದೇ ಮಾದರಿ ರಾಜ್ಯದಲ್ಲಿ ಜಾರಿಗೆ ಬರಲಿ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

BASAVARJ BOMMAI (1)

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಯಾವುದೇ ವ್ಯಕ್ತಿ ಇಲ್ಲವೇ ಸಂಘಟನೆಗಳಿಗೆ ಬುಲ್ಡೋಜರ್ ಮೂಲಕವೇ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನತೆಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಬಾರುಕೋಲು ಬೀಸುತ್ತೇನೆ: ಸಿದ್ದರಾಮಯ್ಯ

ಕೆಜಿ ಹಳ್ಳಿ- ಡಿಜಿ ಹಳ್ಳಿಯಿಂದ ಆರಂಭವಾಗಿ ಶಿವಮೊಗ್ಗದ ಹರ್ಷ ಕಗ್ಗೊಲೆಯಾಗಿ ಹುಬ್ಬಳ್ಳಿ ಇದೇ ರಕ್ಕಸ ಪ್ರವೃತ್ತಿ ಕಾಣಿಸಿಕೊಂಡಿದೆ. ಮುಂದೆ ಇನ್ಯೇಲ್ಲೋ ಗೊತ್ತಿಲ್ಲ. ರಾಜ್ಯ ಸರ್ಕಾರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಕ್ಷಣವೇ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಲು ಉತ್ತರಪ್ರದೇಶದ ಮಾದರಿ ಜಾರಿ ಮಾಡಲು ನಾನು ಆಗ್ರಹಿಸುತ್ತೇನೆ.

ಇಲ್ಲಿಯೇ ಹುಟ್ಟಿ, ಈ ನೆಲದಲ್ಲಿ ಬಿತ್ತಿ ಬೆಳೆದ ಅನ್ನ ತಿಂದು, ಇಲ್ಲಿ ಹರಿಯುವ ನೀರು ಕುಡಿದು, ನಾವೆಲ್ಲರೂ ಒಂದೇ ಎನ್ನುತ್ತಲೇ ಪಾಕ್ ಪರ ಕನಿಕರ ತೋರುವ ಇವರು ಕೊನೆಗೊಂದು ದಿನ ನಮಗೆ ಮುಳುವಾದರೂ ಅಚ್ಚರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

ಕೆಲವು ಸೈತನಾರಿಗೆ ಈ ದೇಶದ ಕಾನೂನು ನಮ್ಮನ್ನು ಏನು ಮಾಡಲಾರದು ಎಂದುಕೊಂಡಿದ್ದಾರೆ. ಏಕೆಂದರೆ, ನಮ್ಮಲ್ಲಿರುವ ನಕಲಿ ಜಾತ್ಯಾತೀತ ಮನಸ್ಸುಗಳು ಇವರಿಗೆ ಕುಮ್ಮಕ್ಕು ನೀಡುತ್ತಿರುವುದರಿಂದಲೇ ಇವರ ಆಟಾಟೋಪಾಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಉತ್ತರಪ್ರದೇಶದಲ್ಲಿ ದೇಶದ ಹೆಮ್ಮೆಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇಂತಹ ದೇಶದ್ರೋಹಿಗಳಿಗೆ ಬುಲ್ಡೋಜರ್ ಮೂಲಕವೇ ಉತ್ತರ ಕೊಟ್ಟಿದ್ದರಿಂದ ನಮ್ಮ ಶತ್ರು ರಾಷ್ಟ್ರದ ಪರ ಜೈ, ಜೈ ಎನ್ನುತ್ತಿದ್ದ ಪಾಕ್ ಪ್ರೇಮಿಗಳು ಈಗ ಬಿಲ ಸೇರಿಕೊಂಡಿವೆ ಎಂಬುದನ್ನು ನಾವು ಮರೆಯಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂ ಪೊಲೀಸರಿಂದ ಗುಜರಾತ್ MLA ಜಿಗ್ನೇಶ್ ಮೇವಾನಿ ಬಂಧನ

ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಸಾರ್ವಜನಿಕರ ಆಸ್ತಿ- ಪಾಸ್ತಿಗಳನ್ನು ಹಾಳು ಮಾಡುವ ದೇಶದ್ರೋಹಿಗಳಿಗೆ ಸೇರಿದ ಆಸ್ತಿಯನ್ನು ಮುಲಾಜಿಲ್ಲದೆ ಬುಲ್ಡೋಜರ್ ಮೂಲಕ ತೆರವುಗೊಳಿಸಿ ಸರ್ಕಾರ ತನ್ನ ವಶಕ್ಕೆ ಪಡೆಯಬೇಕು. ಇದು ಬಹು ಜನರ ಒತ್ತಾಸೆಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳಿಂದ ಸಾರ್ವಜನಿಕರು ಭಯಭೀತರಾಗಿರುವುದು ಗುಟ್ಟಾಗಿ ಉಳಿದಿಲ್ಲ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಬುಲ್ಡೋಜರ್ ಮಾದರಿ ಜಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *