Bengaluru CityDistrictsKarnatakaLatestMain Post
ಸರ್ಕಾರದ ವಿರುದ್ಧ ಬಾರುಕೋಲು ಬೀಸುತ್ತೇನೆ: ಸಿದ್ದರಾಮಯ್ಯ

ಬೆಂಗಳೂರು: ರೈತ ನಾಯಕ ಪ್ರೊ. ನಂಜುಂಡ ಸ್ವಾಮಿಯವರ ಚಿಂತನೆಯನ್ನೊಳಗೊಂಡ ‘ಬಾರುಕೋಲು’ ಪುಸ್ತಕವನ್ನು ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆ ನಂತರ ಸಿದ್ದರಾಮಯ್ಯ ನಂಜುಂಡ ಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನ ಕೈ ಯಲ್ಲಿ ಹಿಡಿದುಕೊಂಡು ಆತ್ಮೀಯವಾಗಿ ಅದನ್ನ ನೋಡಿದ್ದಾರೆ. ಇದನ್ನ ಸರ್ಕಾರದ ವಿರುದ್ಧ ಬೀಸುತ್ತೇನೆ ಎಂದು ಎರಡು ಬಾರಿ ಬಾರುಕೋಲು ಬೀಸಿದ್ದಾರೆ.
ನಂತರದಲ್ಲಿ ಮಾತನಾಡಿದ ಪ್ರೊ. ನಂಜುಂಡ ಸ್ವಾಮಿ ಪುತ್ರಿ ವಚನ ಚುಕ್ಕಿ ನಂಜುಂಡಸ್ವಾಮಿ ಎಲ್ಲಾ ರೈತರು ಇದನ್ನು ಹೆಗಲಿಗೆ ಹಾಕಿಕೊಳ್ಳಬೇಕು ಅನ್ನುತ್ತಿದ್ದರು ಎಂದು ತಮ್ಮ ತಂದೆಯ ಮಾತನ್ನು ನೆನಪಿಸಿಕೊಂಡರು.
ಈ ವೇಳೆ ಸಿದ್ದರಾಮಯ್ಯನವರು ಬಾರುಕೋಲನ್ನು ಹೆಗಲಿಗೆ ಹಾಕಿಕೊಂಡು ಪೋಸ್ ಕೊಟ್ಟರು. ನಂಜುಂಡ ಸ್ವಾಮಿ ಯಾವಾಗಲು ಸರ್ಕಾರದ ವಿರುದ್ಧ ಬಾರುಕೋಲು ಚಳುವಳಿಯನ್ನುತ್ತಿದ್ದರು ಎಂದು ನೆನಪಿಸಿಕೊಂಡರು.