ಲಕ್ನೋ: ಪ್ರಧಾನಿ ಮೋದಿ ಹೆಸರಲ್ಲಿ ಅಧಿಕಾರಕ್ಕೆ ಬಂದರೂ ನಾವು ಜನರಿಗಾಗಿ ಏನೂ ಕೆಲಸ ಮಾಡಿಲ್ಲ. ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಮತ್ತು ಅಧ್ಯಕ್ಷರು ಹಗರಣದಲ್ಲಿ ತೊಡಗಿದ್ದಾರೆ. ಉಪ ಚುನಾವಣೆಗಳಲ್ಲಿ ಇದೇ ನಮ್ಮ ಸೋಲಿಗೆ ಕಾರಣವಾಯ್ತು ಎಂದು ಬಿಜೆಪಿ ಶಾಸಕ ಶ್ಯಾಮ್ ಪ್ರಕಾಶ್ ಬರೆದುಕೊಂಡಿದ್ದಾರೆ.
ಕೈರಾನಾ ಲೋಕಸಭಾ ಕ್ಷೇತ್ರ ಮತ್ತು ನೂರಪುರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಸೋಲಿನ ಬಳಿಕ ಶ್ಯಾಮ್ ಪ್ರಕಾಶ್, ತಮ್ಮ ಫೇಸ್ ಬುಕ್ ಪೇಜಿನಲ್ಲಿ 10 ಸಾಲುಗಳ ಕವನವೊಂದನ್ನು ಬರೆದುಕೊಂಡಿದ್ದಾರೆ. ಈ ಮೊದಲು ಗೊರಖಪುರ, ಫೂಲಪುರ ಬಳಿಕ ಕೈರಾನಾ ಮತ್ತು ನೂರಪುರ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ ಅಂತಾ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಉಪ ಚುನಾವಣೆ ಬಿಜೆಪಿಗೆ ಸೋಲು- ಮೈತ್ರಿಗೆ ಗೆಲುವು
Advertisement
Advertisement
ಈ ಪೋಸ್ಟ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಸಹಾಯಕತೆ ಬಗ್ಗೆ ಹೇಳಿದ್ದಾರೆ. ಮೋದಿ ಅವರ ಹೆಸರು ಹೇಳಿಕೊಂಡು ನಾವು ಅಧಿಕಾರಕ್ಕೆ ಬಂದರೂ ಜನರಿಗಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದ್ದೇವೆ. ಸಂಘ ಮತ್ತು ಸಂಘಟನೆ ಸರ್ಕಾರವನ್ನು ನಿಯಂತ್ರಣ ಮಾಡುತ್ತಿರುವುದರಿಂದ ಸಿಎಂ ಅಸಹಾಯಕರಾಗಿದ್ದಾರೆ. ಅಧಿಕಾರಿ ಮತ್ತು ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರೈಲು ಹಳಿಯಿಂದ ಇಳಿದು ಚಲಿಸಲು ಆರಂಭಿಸಿದೆ. ಇನ್ನು ಕೊನೆಯ ಸಾಲುಗಳಲ್ಲಿ ಬುದ್ಧಿವಂತರಿಗೆ ಅರ್ಥ ಮಾಡಿಕೊಳ್ಳಲು ಸನ್ನೆ ಸಾಕು. ಮುಂದೆ ನಮ್ಮನ್ನು ಅಧಿಕಾರ ಮತದಾರರ ಕೈಯಲ್ಲಿದೆ ಎಂದು ಎಚ್ಚರಿಸಿದ್ದಾರೆ.
Advertisement
Officers are corrupt. Farmers aren't happy with govt. There are several reasons behind BJP's loss. I've nothing against govt, officers are at fault. Corruption, as compared to last govt, is on a rise. That's the reason of my resentment: Shyam Prakash, BJP MLA on his Facebook post pic.twitter.com/w3lOZhFxyv
— ANI UP/Uttarakhand (@ANINewsUP) June 1, 2018