ಪಾದ ಮುಟ್ಟಿ ನಮಸ್ಕರಿಸಿದ ಬಿಜೆಪಿ ನಾಯಕರಿಗೆ ಮೋದಿ ಹೇಳಿದ್ದೇನು ಗೊತ್ತಾ?

Public TV
2 Min Read
modi 5

ಲಕ್ನೋ: ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷರು ಚುನಾವಣಾ ರ್‍ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.

ಭಾನುವಾರ ಮೋದಿ ಅವರು ರ್‍ಯಾಲಿಗೆ ಆಗಮಿಸುತ್ತಿದ್ದಂತೆ ಬಿಜೆಪಿಯ ಯುಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಮತ್ತು ಬಿಜೆಪಿಯ ಉನ್ನಾವೊ ಜಿಲ್ಲಾಧ್ಯಕ್ಷ ಅವಧೇಶ್ ಕಟಿಯಾರ್ ಶ್ರೀರಾಮನ ವಿಗ್ರಹವನ್ನು ಮೋದಿ ಅವರಿಗೆ ನೀಡಿದರು. ಇದನ್ನೂ ಓದಿ: ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ

modi 2 1

ಈ ವೇಳೆ ಅವಧೇಶ್ ಕಟಿಯಾರ್ ಅವರು ವಿಗ್ರಹವನ್ನು ನೀಡಿದ ಬಳಿಕ, ಕೆಳಗೆ ಬಾಗಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಆಗ ಕಟಿಯಾರ್ ಅವರನ್ನು ತಕ್ಷಣವೇ ಕಾಲಿಗೆ ಬೀಳುವುದನ್ನು ನಿಲ್ಲಿಸುವಂತೆ ಮೋದಿ ಸೂಚಿಸಿ, ನನ್ನ ಪಾದಗಳನ್ನು ಮುಟ್ಟಬೇಡಿ ಎಂದು ಅವಧೇಶ್ ಕಟಿಯಾರ್ ಅವರ ಕಾಲನ್ನು ಮೋದಿ ಅವರು ಸ್ಪರ್ಶಿಸಿದರು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಜೆಪಿಯಿಂದ ಉನ್ನಾವೊ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಅವಧೇಶ್ ಕಟಿಯಾರ್ ಅವರು ಈ ಹಿಂದೆ ಉನ್ನಾವೊದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದನ್ನೂ ಓದಿ: ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು – ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್

ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆಬ್ರವರಿ 23 ರಂದು ಉತ್ತರಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ನಡೆಯಲಿದೆ. ಭಾನುವಾರ ಉನ್ನಾವೊದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ ಅವರು, ನೀವು ನೋಡಿರಬೇಕು, ವೇದಿಕೆಯಿಂದ ತಳ್ಳಲ್ಪಟ್ಟ ಮುಲಾಯಂ ಸಿಂಗ್ ಯಾದವ್ ಅವಮಾನಕ್ಕೊಳಗಾದರು ಮತ್ತು ಪಕ್ಷವನ್ನು ವಶಪಡಿಸಿಕೊಂಡರು. ಕೊನೆಗೆ ಅಖಿಲೇಶ್ ಸ್ಥಾನವನ್ನು ಉಳಿಸಲು ಮುಲಾಯಂ ಅವರು ಕರ್ಹಾಲ್‍ನಲ್ಲಿ ಮನವಿ ಮಾಡಬೇಕಾಯಿತು ಎಂದು ವ್ಯಂಗ್ಯವಾಡಿದರು.

ಉತ್ತರ ಪ್ರದೇಶದ 403 ಸದಸ್ಯ ಬಲದ ವಿಧಾನಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮೆಟ್ರೋವನ್ನು ತಂದಿದ್ದು ಎಸ್‍ಪಿ ಸರ್ಕಾರ, ಉದ್ಘಾಟಿಸಿದ್ದು ಯೋಗಿ ಆದಿತ್ಯನಾಥ್: ಅಖಿಲೇಶ್ ಯಾದವ್

Share This Article
Leave a Comment

Leave a Reply

Your email address will not be published. Required fields are marked *