ಲಕ್ನೋ: ಜೈಲಿನಿಂದ ನ್ಯಾಯಾಲಯಕ್ಕೆ ಗ್ಯಾಂಗ್‌ಸ್ಟರ್-ರಾಜಕಾರಣಿಯನ್ನು ಆಂಬುಲೆನ್ಸ್‌ನಲ್ಲಿ ಹಾಜರುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ನಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರನ್ನು ಜೈಲಿನಿಂದ ಕೋರ್ಟ್‌ಗೆ ಹಾಜರುಪಡಿಸಲು ಆಂಬುಲೆನ್ಸ್ ನೀಡಿದ ಆರೋಪದಡಿ ಬಿಜೆಪಿ ನಾಯಕಿ ಡಾ.ಅಲ್ಕಾ ರೈ ಮತ್ತು ಆಕೆಯ ಸಹೋದರ ಶೇಷನಾಥ್ ರೈ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
- Advertisement
ಮುಖ್ತಾರ್ ಅನ್ಸಾರಿ ಮತ್ತು 12 ಮಂದಿ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅದರಂತೆ ಇಬ್ಬರು ಆರೋಪಿಗಳಾದ ಅಲ್ಕಾ ರೈ ಮತ್ತು ಶೇಷನಾಥ್ ರೈ ಅವರನ್ನು ಪೊಲೀಸರು ಮೌ ಜಿಲ್ಲೆಯಲ್ಲಿ ಬಂಧಿಸಿ, ಬಾರಾಬಂಕಿಗೆ ಕರೆದೊಯ್ದಿದ್ದಾರೆ.
- Advertisement
ಅಲ್ಕಾ ರೈ ಅವರು ಸಂಜೀವಿನಿ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಮುಖ್ತಾರ್ ಅನ್ಸಾರಿಯನ್ನು ಜೈಲಿನಿಂದ ಕೋರ್ಟ್‌ಗೆ ಹಾಜರುಪಡಿಸಲು ಬುಲೆಟ್ ಪ್ರೂಫ್ ಆಂಬುಲೆನ್ಸ್ ಒದಗಿಸಿದ್ದರು. ಈ ಆರೋಪದಡಿ ಅವರನ್ನು ಬಂಧಿಸಲಾಗಿದೆ.
ಡಾ.ಅಲ್ಕಾ ರೈ ಅವರು ಪ್ರಕರಣವೊಂದರಲ್ಲಿ 8 ತಿಂಗಳು ಜೈಲುವಾಸ ಅನುಭವಿಸಿದ್ದರು. ಈಚೆಗಷ್ಟೇ ಬಿಡುಗಡೆಯಾಗಿ ಹೊರಬಂದಿದ್ದರು. ಇದೀಗ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾರೆ
ಅನ್ಸಾರಿ ಮತ್ತು ಈತನ ಸಹಚರರು ಲಕ್ನೋ ಜೈಲಿನಲ್ಲಿದ್ದಾಗ ಜೈಲಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ಜೈಲರ್ ಎಸ್.ಎನ್.ದ್ವಿವೇದಿ 2000ರಲ್ಲೇ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಅನ್ಸಾರಿ ಜೈಲು ಸೇರಿದ್ದಾರೆ. ಇದನ್ನೂ ಓದಿ: ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ