ಲಕ್ನೋ: ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಅನೇಕ ಜನರು ಶತಪ್ರಯತ್ನ ನಡೆಸುತ್ತಾರೆ. ಕೆಲವರಂತೂ ಗೆಲ್ಲಲು ಹಣ ಚೆಲ್ಲುತ್ತಾರೆ, ಮನೆ ಮಠವನ್ನೆಲ್ಲ ಮಾರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 100 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುವ ಬಯಕೆಯನ್ನು ಹೊಂದಿದ್ದಾರೆ ಎನ್ನುವುದು ನಿಮಗೆ ಅಚ್ಚರಿ ಮೂಡಿಸಬಹುದು.
ಹೌದು, ಉತ್ತರ ಪ್ರದೇಶ ಮೂಲದ ಹಸನೂರಾಮ್ ಅಂಬೇಡ್ಕರ್ ಇಲ್ಲಿಯವರೆಗೆ 93 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ತಮ್ಮ 94ನೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
Advertisement
Advertisement
ಉತ್ತರ ಪ್ರದೇಶದ ಆಗ್ರಾದ ಖೇರಗಢ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಸನೂರಾಮ್ ಅಂಬೇಡ್ಕರ್ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. ಮುಂದಿನ ಚುನಾವಣೆಗೂ ಇವರು ಈಗಾಗಲೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ ಟೆಕ್ಕಿ ಅರೆಸ್ಟ್
Advertisement
1985ರಲ್ಲಿ ಹಸನೂರಾಮ್ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. 1998ರಲ್ಲಿ ರಾಷ್ಟ್ರಪತಿ ಹುದ್ದೆಗೂ ಸ್ಪರ್ಧಿಸಿದ ಇವರು 100 ಬಾರಿ ಚುನಾವಣೆಯಲ್ಲಿ ಸೋಲುವ ನಿರ್ಧಾರ ಮಾಡಿದ್ದರು.
Advertisement
1985ರಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದಾಗ ಹಲವರು ನನಗೆ ಅಪಹಾಸ್ಯ ಮಾಡಿದ್ದರು. ನನ್ನ ಪತ್ನಿಯೂ ನನಗೆ ಸಹಕಾರ ನೀಡದ ಕಾರಣ ತೀವ್ರವಾಗಿ ಹತಾಶನಾಗಿದ್ದೆ. ಅಂದಿನಿಂದ ನಾನು ಪ್ರತಿ ಚುನಾವಣೆಯಲ್ಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹಸನೂರಾಮ್ ಹೇಳುತ್ತಾರೆ. ಇದನ್ನೂ ಓದಿ: ಚುನಾವಣೆ ಸೋಲಿನ ಬಳಿಕ ವೋಟಿಂಗ್ ಯಂತ್ರ ವಶಪಡಿಸಿಕೊಳ್ಳಲು ಟ್ರಂಪ್ ಆದೇಶ!