ಹುಬ್ಬಳ್ಳಿ: ತಮಿಳುನಾಡು ವಿರುದ್ಧ ರಣಜಿ ಪಂದ್ಯ ಗೆದ್ದು ಬೀಗುತ್ತಿರುವ ಕರ್ನಾಟಕ ರಣಜಿ ತಂಡ ಡಿಸೆಂಬರ್ 17ರಿಂದ ಉತ್ತರ ಪ್ರದೇಶ ತಂಡದ ವಿರುದ್ಧ ನಡೆಯಲಿರುವ ರಣಜಿ ಪಂದ್ಯಕ್ಕಾಗಿ ಸಜ್ಜಾಗಿದೆ.
ಜಿಲ್ಲೆಯ ಕೆಎಸ್‍ಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಲ್ಗೊಳ್ಳಲು ಈಗಾಗಲೇ ಉತ್ತರ ಪ್ರದೇಶ ತಂಡ ಹುಬ್ಬಳ್ಳಿಗೆ ಆಗಮಿಸಿದೆ. ಕರ್ನಾಟಕ ತಂಡ ಇಂದು ಸಂಜೆ ಹುಬ್ಬಳ್ಳಿಗೆ ಆಗಮಿಸಲಿದೆ.
Advertisement
Advertisement
ಕೆಎಸ್‍ಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಈಗಾಗಲೇ ಕ್ರೀಡಾಂಗಣ ಸಿದ್ಧಗೊಂಡಿದ್ದು, ಎರಡು ತಂಡಗಳು, ಎರಡು ದಿನಗಳ ಕಾಲ ಅಭ್ಯಾಸ ನಡೆಸಲಿವೆ. ಇದೇ ಮೊದಲ ಬಾರಿಗೆ ರಣಜಿ ಪಂದ್ಯ ಒಂದರ ನೇರಪ್ರಸಾರ ಕೂಡ ನಡೆಯಲಿರುವುದು ವಿಶೇಷವಾಗಿದೆ. 2018ರ ಕೆಪಿಎಲ್ ಪಂದ್ಯಾವಳಿ ಬಳಿಕ ಪ್ರಸ್ತುತ ರಣಜಿ ಪಂದ್ಯ ನೇರ ಪ್ರಸಾರವಾಗಲಿದೆ.
Advertisement
ಪಂದ್ಯ ವೀಕ್ಷಣೆಗಾಗಿ ಪೇಕ್ಷಕರ ಗ್ಯಾಲರಿ ಸಜ್ಜುಗೊಳಿಸಲಾಗುತ್ತಿದ್ದು, ಪಂದ್ಯಾವಳಿಗಾಗಿ ಪ್ರೇಕ್ಷಕರ ವೀಕ್ಷಣೆಗೆ 1500 ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಣಜಿ ಪಂದ್ಯಕ್ಕಾಗಿ ಹೊಸ ಪೆವಿಲಿಯನ್ ಸಿದ್ಧಪಡಿಸಲಾಗುತ್ತಿದ್ದು, ಡ್ರೇಸಿಂಗ್ ರೂಂ, ಕಾಮೆಂಟೆಟರ್ ಬಾಕ್ಸ್ ಸಹ ಸಿದ್ದಗೊಂಡಿದೆ.
Advertisement
ಹುಬ್ಬಳ್ಳಿ ನಡೆಯಲಿರುವ ಉತ್ತರಪ್ರದೇಶ ಹಾಗೂ ಕರ್ನಾಟಕ ರಣಜಿ ಪಂದ್ಯಾವಳಿ ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ನಡೆಯುತ್ತಿರುವುದು ಕ್ರಿಕೆಟ್ ಕ್ರೀಡಾಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ.