ಮಕ್ಕಳನ್ನು ಬಲಿಕೊಡಲು ಮನಸ್ಸಾಗದೇ ತಾನೊಬ್ಬಳೇ ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

Public TV
1 Min Read
karwar kumta suicide uttara kannada

ಕಾರವಾರ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ಕರೆದುಕೊಂಡು ಆತ್ಮಹತ್ಯೆಗೆ (Suicide) ಮುಂದಾದರೂ ಕೊನೆಗೆ ಮುಗ್ದ ಮಕ್ಕಳನ್ನು ಬಲಿಕೊಡಲು ಮನಸ್ಸಾಗದೇ ತಾನೊಬ್ಬಳೇ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾದ (Kumta) ಹೆಡ್‌ಬಂದರ್ ಬಳಿ ನಡೆದಿದೆ.

ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮನೆಯಿಂದ ಸ್ಕೂಟಿಯಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆ ಯೋಜಿಸಿದ್ದಳು. ಆದರೆ ಮಕ್ಕಳನ್ನು ಬಲಿ ಕೊಡಲು ಮನಸ್ಸು ಒಪ್ಪದೇ ಕುಮಟಾದ ಪಿಕ್‌ಅಪ್ ಬಸ್‌ನಿಲ್ದಾಣದ ಬಳಿ ಅವರಿಬ್ಬರನ್ನು ಬಿಟ್ಟು, ಬಳಿಕ ತಾನೊಬ್ಬಳೇ ಕುಮಟಾದ ಬಂದರಿನ ಕಡಲ ತೀರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

ಸಮುದ್ರಕ್ಕೆ ಹಾರುವುದಕ್ಕೂ ಮುನ್ನ ಮಹಿಳೆ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದ್ದಾಳೆ. ಮಹಿಳೆ ಸಮುದ್ರಕ್ಕೆ ಹಾರುವುದನ್ನು ಗಮನಿಸಿದ ಲೈಫ್‌ಗಾರ್ಡ್‌ಗಳು ಆಕೆಯ ರಕ್ಷಣೆಗೆ ಮುಂದಾದರೂ ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ಕೊನೆಗೆ ಮಹಿಳೆ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಲಗಿದ್ದಾಗ ತಲೆಗೆ ದೊಣ್ಣೆಯಿಂದ ಹೊಡೆದು ಪತ್ನಿ ಕೊಂದ ಪತಿ

Share This Article