ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಜಾರಿಗೆ ಬಂದ ಮೇಲೆ ಗೃಹಜ್ಯೋತಿ ಯೋಜನೆ (Gruhajyoti Scheme) ಮೂಲಕ ಪ್ರತಿ ಮನೆಗೂ ಉಚಿತ ವಿದ್ಯುತ್ತನ್ನು ಕೊಡುತ್ತಿದೆ. ಆದರೆ ಜಿಲ್ಲೆಯ ಜನ್ನಘಟ್ಟ ಮಜರಾ ಓಬೇನಹಳ್ಳಿ ಗ್ರಾಮ ಮಾತ್ರ ಈ ಯೋಜನೆಯಿಂದ ಹೊರಗುಳಿದಿದೆ.
Advertisement
ರಾಜ್ಯ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯಿಂದ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಮನೆ ಬೆಳಗುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಆದರೆ ಜಿಲ್ಲೆಯ ಈ ಗ್ರಾಮ ಗ್ಯಾರಂಟಿ ಯೋಜನೆಯಿಂದ ಹೊರಗುಳಿದಿದೆ.ಇದನ್ನೂ ಓದಿ: Paris Paralympics 2024 | ಭಾರತ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ – ದಾಖಲೆಯ 20 ಪದಕ
Advertisement
Advertisement
ಈ ಗ್ರಾಮದಲ್ಲಿ ಶಾಲಾ ಮಕ್ಕಳು ಕ್ಯಾಂಡಲ್ ದೀಪವಿಟ್ಟುಕೊಂಡು ಓದುತ್ತಾರೆ. ಸೀಮೆ ಎಣ್ಣೆ ದೀಪವಿಟ್ಟುಕೊಂಡು ಮಹಿಳೆಯರು ಅಡುಗೆ ಕೆಲಸ ಮಾಡುತ್ತಾರೆ. ಗೃಹಜ್ಯೋತಿ ಯೋಜನೆ ಜಾರಿಗೆ ಮೊದಲು 12 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಕೊಡುತ್ತಿದ್ದರು. ಬಳಿಕ 8 ಗಂಟೆ ಮೂರು ಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಗೃಹಜ್ಯೋತಿ ಯೋಜನೆ ಜಾರಿಗೆ ತಂದ ಮೇಲೆ ಓಬೇನಹಳ್ಳಿ ಗ್ರಾಮಕ್ಕೆ ಕೇವಲ ಮೂರು ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಗ್ರಾಮದ ಜನರು ಮನೆಯಲ್ಲಿ ಲೈಟಿಂಗ್ಸ್ ಹಾಗೂ ಗೃಹಪಯೋಗಕ್ಕೆ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಗ್ರಾಮದ ಹೊರಗೆ ತೋಟಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಸಂಜೆಯಾದರೆ ಜೀವಭಯದಲ್ಲಿ ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ.
Advertisement
ಕಳೆದ 30-40 ವರ್ಷಗಳಿಂದ ಜನ್ನಘಟ್ಟ ಗ್ರಾಮಸ್ಥರು ಊರ ಹೊರಗೆ ತಮ್ಮ ತಮ್ಮ ಹೊಲಗಳಲ್ಲಿ ಬಂದು ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜನ್ನಘಟ್ಟ ಮಜರಾ ಓಬೇನಹಳ್ಳಿ ಗ್ರಾಮ ಮಾಡಿಕೊಂಡಿದ್ದಾರೆ. ಇಲ್ಲಿ ಸುಮಾರು 20 ಮನೆಗಳಿವೆ. ಈ ಮೊದಲು ಇಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಮೋಟಾರ್ ಪಂಪ್‌ಸೆಟ್‌ಗಳಿಗೆ ಪ್ರತ್ಯೇಕ ವಿದ್ಯುತ್ ಸರಬರಾಜಾಗುತ್ತಿತ್ತು. ಮನೆಯ ಗೃಹಪಯೋಗಕ್ಕೆ ಪ್ರತ್ಯೇಕ 24 ಗಂಟೆ ವಿದ್ಯುತ್ ಅಡಿಯಲ್ಲಿ ಸರಬರಾಜಾಗುತ್ತಿತ್ತು. ಆದರೆ ಗೃಹಜ್ಯೋತಿ ಯೋಜನೆ ಜಾರಿಗೆ ಬಂದ ನಂತರ ಸಿಂಗಲ್ ಫೇಸ್ ವಿದ್ಯುತ್ ಕಡಿತ ಮಾಡಿದ ಪರಿಣಾಮ ಈ ಗ್ರಾಮದ ಮನೆಗಳಿಗೆ ವಿದ್ಯುತ್ ಇಲ್ಲದೇ ಪರದಾಡುವಂತಾಗಿದೆ. ಇನ್ನು ಗೃಹೋಪಯೋಗಿ ವಿದ್ಯುತ್‌ಗೆ ಪ್ರತ್ಯೇಕ ಲೈನ್ ಹಾಕಿಕೊಡಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದರೂ ಅಧಿಕಾರಿಗಳು ಮಾಡಿಕೊಡಲು ಸಿದ್ಧರಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರ ಸರ್ಚಿಂಗ್ – ಕೇರಳದ 455 ಕಡೆ ದಾಳಿ, 6 ಬಂಧನ
ಗೃಹಜ್ಯೋತಿ ಯೋಜನೆಯಿಂದ ಉಚಿತವಾಗಿ ನಮಗೆ ವಿದ್ಯುತ್ ಸಿಗುತ್ತದೆ. ಗ್ರಾಮಸ್ಥರು ದಿನದ 24 ಗಂಟೆಯೂ ವಿದ್ಯುತ್ ನಳನಳಿಸುತ್ತದೆ ಎಂದು ಕನಸು ಕಂಡಿದ್ದರು. ಸದ್ಯ ಹಣ ಕೊಡುತ್ತೇವೆ ಎಂದರೂ ಇಲ್ಲಿ ವಿದ್ಯುತ್ ಸಿಗದೆ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಿ ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.