ಪ್ಯಾರಿಸ್: ಈ ಬಾರಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ (Paris Paralympics 2024) ಚಿನ್ನದ ಪದಕದೊಂದಿಗೆ ತನ್ನ ಬೇಟೆ ಆರಂಭಿಸಿದ ಭಾರತದ ಅದ್ಭುತ ಪ್ರದರ್ಶನದೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಮಂಗಳವಾರ (ಆ.3) ಒಂದೇ ದಿನ 5 ಪದಕ ಗೆದ್ದಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲೇ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಸದ್ಯ ಭಾರತ ಪದಕ ಪಟ್ಟಿ 20ಕ್ಕೆ ಹೆಚ್ಚಾಗಿದೆ. ಈ ಮೂಲಕ ಟೋಕಿಯೊ ಕ್ರೀಡಾಕೂಟದಲ್ಲಿ ಗೆದ್ದಿದ್ದ 19 ಪದಕಗಳ ದಾಖಲೆ ಮುರಿದಿದೆ.
Advertisement
ಮಂಗಳವಾರ ಭಾರತಕ್ಕೆ ಅಥ್ಲೆಟಿಕ್ಸ್‌ನ (Indian Athletes) ಜಾವಲಿನ್ ಎಸೆತದಲ್ಲಿ 2, ಹೈ ಜಂಪ್‌ನಲ್ಲಿ 2 ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ 1 ಪದಕ ಲಭಿಸಿತು. ಸದ್ಯ ಭಾರತ 3 ಚಿನ್ನ, 7 ಬೆಳ್ಳಿ ಹಾಗೂ 10 ಕಂಚು ಜಯಿಸಿದೆ. ಟೋಕಿಯೋದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದಿತ್ತು. ಈ ಬಾರಿ ಕ್ರೀಡಾಕೂಟದಲ್ಲಿ ಇನ್ನೂ 4 ದಿನ ಬಾಕಿ ಇದ್ದು, ಭಾರತ ಮತ್ತಷ್ಟು ಪದಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ.
Advertisement
Advertisement
3ನೇ ಪದಕ ಗೆದ್ದ 3ನೇ ಅಥ್ಲಿಟ್:
ಮರಿಯಪ್ಪನ್ ತಂಗವೇಲು ಭಾರತದ ಪರ ಪ್ಯಾರಾಲಿಂಪಿಕ್ಸ್‌ನಲ್ಲಿ ಮೂರು ಬಾರಿ ಪದಕ ಗೆದ್ದ 3ನೇ ಕ್ರೀಡಾಪಟು ಎನಿಸಿಕೊಂಡರು. ಪುರುಷರ ಜಾವಲಿನ್‌ನಲ್ಲಿ ದೇವೇಂದ್ರ ಝಝಾರಿಯಾ 2 ಚಿನ್ನ, 1 ಬೆಳ್ಳಿ, ಶೂಟಿಂಗ್‌ನಲ್ಲಿ ಅವನಿ ಲೇಖರಾ 2 ಚಿನ್ನ, ಕಂಚು ಗೆದ್ದಿದ್ದಾರೆ. ತಂಗವೇಲು 2016ರ ರಿಯೋ ಕ್ರೀಡಾಕೂಟದಲ್ಲಿ ಚಿನ್ನ, 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮುಡಗೇರಿಸಿಕೊಂಡಿದ್ದರು. ಇದನ್ನೂ ಓದಿ: Paralympics | ಮನೀಶಾ ಕಂಚಿನ ಮಿಂಚು – ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ!
Advertisement
400 ಮೀ. ಓಟದಲ್ಲಿ ದೀಪ್ತಿಗೆ ಕಂಚು:
ಮಂಗಳವಾರ ರಾತ್ರಿ ನಡೆದ ಮಹಿಳೆಯರ 400 ಮೀಟರ್ ಟಿ20 ವಿಭಾಗದಲ್ಲಿ ದೀಪ್ತಿ ಜೀವಾಂಗಿ 55.82 ಸೆಕೆಂಡುಗಳಲ್ಲಿ ತಮ್ಮ ಗುರಿ ತಲುಪಿ ಕಂಚಿನ ಪದಕಕಕ್ಕೆ ಕೊರಳೊಡ್ದಿದರು. ಇದನ್ನೂ ಓದಿ: Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್ ಕಥುನಿಯಾಗೆ ಬೆಳ್ಳಿ
ಕಂಚು ಗೆದ್ದ ನಿತ್ಯಶ್ರೀ:
ಬ್ಯಾಡ್ಮಿಂಟನ್‌ನಲ್ಲಿ ಈ ಬಾರಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಸೋಮವಾರ ಮಧ್ಯರಾತ್ರಿ ಮಹಿಳೆಯರ ಸಿಂಗಲ್ಸ್‌ನ ಎಎಚ್6 ವಿಭಾಗ (ಕುಬ್ಬ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ)ದಲ್ಲಿ ನಿತ್ಯಶ್ರೀ ಶಿವನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್
ಮನೀಶಾ ಕಂಚಿನ ಮಿಂಚು
ಬ್ಯಾಡ್ಮಿಂಟನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಎಸ್‌ಯು5 ವಿಭಾಗದಲ್ಲಿ ಭಾರತದ ಮನೀಶಾ ರಾಮದಾಸ್ (Manisha Ramadass) ಕಂಚಿನ ಪದಕ ಗೆದ್ದು ಬೀಗಿದರು. ಲಾ ಚಾಪೆಲ್ಲೆ ಅರೆನಾ ಕೋರ್ಟ್ 3 ರಲ್ಲಿ ಡೆನ್ಮಾರ್ಕ್‌ನ ಕ್ಯಾಥರೀನ್ ರೋಸೆಂಗ್ರೆನ್ ಅವರನ್ನು 25 ನಿಮಿಷಗಳಲ್ಲಿ 21-12, 21-8 ಸೆಟ್‌ಗಳಿಂದ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥುನಿಯಾಗೆ ಬೆಳ್ಳಿ:
ಭಾರತದ ಯೋಗೇಶ್ ಕಥುನಿಯಾ (Yogesh Kathuniya) ಅವರು ಪುರುಷರ ಡಿಸ್ಕಸ್ ಥ್ರೋ ಎಫ್-56 ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ದಿದರು. 42.22 ಮೀಟರ್ ಡಿಸ್ಕಸ್ ಎಸೆಯುವ (Discus Throw, )ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.
ಇದಕ್ಕೂ ಮುನ್ನ 2023ರ ಅರ್ಜುನ ಪ್ರಶಸ್ತಿ ವಿಜೇತೆ, ಬಿಲ್ಲುಗಾರ್ತಿ ಶೀತಲ್ ದೇವಿ (Sheetal Devi), ಕ್ರೀಡಾಪಟುಗಳಾದ ನಿಶಾದ್ ಕುಮಾರ್ ಬೆಳ್ಳಿ, ಪ್ರೀತಿ ಪಾಲ್ ಕಂಚು, ಶೂಟರ್ ರುಬಿನಾ ಫ್ರಾನ್ಸಿಸ್ ಕಂಚು, ಶೂಟರ್ ಅವನಿ ಲೆಖರಾ ಚಿನ್ನ ಹಾಗೂ ಮೋನಾ ಅಗರ್ವಾಲ್ ಕಂಚಿನ ಪದಕ ಬಾಚಿಕೊಂಡರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್ ಶೂಟ್