ಹಾವೇರಿ: ಹಾವೇರಿ (Haveri) ಜಿಲ್ಲೆ ಈಗ ಮೆಕ್ಕೆಜೋಳದ (Maize) ಕಣಜ. ಆದರೆ ಸರಿಯಾದ ಬೆಲೆ ಸಿಗದೆ ರೈತರು ಹೋರಾಟ ಮಾಡಿದ್ದರು. ಹೋರಾಟಕ್ಕೆ ಮಣಿದು ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿತ್ತು.. ಈಗ ಖರೀದಿ ಕೇಂದ್ರದಲ್ಲಿ ಫಂಗಸ್ ಮತ್ತು ತೇವಾಂಶ ಕಡಿಮೆ ಇರೋ ಕಾರಣಕ್ಕಾಗಿ ಮೆಕ್ಕೆಜೋಳ ರಿಜೆಕ್ಟ್ ಮಾಡುತ್ತಿದ್ದಾರೆ. ಹೀಗಾಗಿ ಅನ್ನದಾತರು ಕಂಗಾಲಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆಯಲಾಗಿದೆ. ರೈತರು ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸತತವಾಗಿ ಒಂದು ತಿಂಗಳ ಹೋರಾಟ ಮಾಡಿದರು. ಸರ್ಕಾರ 2,400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದರು. ಆದರೆ ನೋಂದಣಿ ಮಾಡಿಕೊಂಡರೂ ಕೆ.ಎಂ.ಎಫ್‌ನಿಂದ ಮೆಕ್ಕೆಜೋಳ ಖರೀದಿ ಆಗುತ್ತಿಲ್ಲ. ಆಗಾಗ್ಗೆ ಎಥಿನಾಲ್ ಮತ್ತು ಕೋಳಿ ಸಾಕಾಣಿಕೆದಾರರು ಖರೀದಿ ಮಾಡುತ್ತಿದ್ದಾರೆ. ಅವರು ಸಹ ಮೆಕ್ಕೆಜೋಳಕ್ಕೆ ಫಂಗಸ್ ಆಗಿದೆ, ಸರಿಯಾದ ರೀತಿಯಲ್ಲಿ ಒಣಗಿಲ್ಲ ಎಂದು ರೈತರ ಮೆಕ್ಕೆಜೋಳ ರಿಜೆಕ್ಟ್ ಮಾಡುತ್ತಿದ್ದಾರೆ. ಸತತವಾಗಿ 19 ದಿನಗಳ ಕಾಲ ಬಾಡಿಗೆ ಕೊಟ್ಟು ಮೆಕ್ಕೆಜೋಳ ಮಾರಾಟ ಮಾಡಲು ತಂದರೂ ಖರೀದಿ ಮಾಡುವ ಖರೀದಿ ಕೇಂದ್ರ ಮಾಲೀಕರು ಮೆಕ್ಕೆಜೋಳ ರಿಜೆಕ್ಟ್ ಮಾಡುತ್ತಿದ್ದಾರೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಇರ್ತಾರೆ: ಸಚಿವ ಕೆ.ಹೆಚ್.ಮುನಿಯಪ್ಪ
ಸರ್ಕಾರ ಬೆಂಬಲ ಘೋಷಣೆ ಮಾಡಿದ ನಂತರ ರೈತರು ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಕ್ಕಿತು, ನಮ್ಮ ಸಾಲ ಸೂಲ ಕಡಿಮೆ ಅಂತ ರೈತರು ಅಂದುಕೊಂಡಿದ್ದರು. ಈಗ ಖರೀದಿ ಕೇಂದ್ರದಲ್ಲಿ ಕಾಟಾಚಾರಕ್ಕೆ ಖರೀದಿ ಮಾಡುತ್ತಿದ್ದಾರೆ. 50 ಟ್ರ‍್ಯಾಕ್ಟರ್‌ನಲ್ಲಿ 40 ಟ್ರ‍್ಯಾಕ್ಟರ್ ಫಂಗಸ್, ತೇವಾಂಶ ಕಡಿಮೆ ಕಾರಣಕ್ಕಾಗಿ ರಿಜೆಕ್ಟ್ ಮಾಡುತ್ತಿದ್ದಾರೆ. 20 ದಿನ ಬಾಡಿಗೆ ಕೊಟ್ಟು ಖರೀದಿ ಕೇಂದ್ರಕ್ಕೆ ತಂದಿದ್ದೇವೆ. ಸುಮ್ಮನೆ ಖರೀದಿ ಕೇಂದ್ರ ಮಾಡಿದ್ದಾರೆ. ಮೆಕ್ಕೆಜೋಳ ರಿಜೆಕ್ಟ್ ಮಾಡುತ್ತಿದ್ದು, ಕಡಿಮೆ ದರಕ್ಕೆ ಮಾರಿ ಹೋಗುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ FIR

