ರಾಮನಗರ: ಪ್ರತಿಷ್ಠಿತ ರಾಮನಗರ ನಗರಸಭೆ (Ramanagara Muncipal Council) ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆ ಹಿನ್ನೆಲೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ (Comngress) ಕೆ.ಶೇಷಾದ್ರಿ (K Sheshadri) ಅವಿರೋಧ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯರ ಸಂಖ್ಯಾಬಲವಿರುವ ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್‌ನ 20 ಸದಸ್ಯರು ಹಾಗೂ ಜೆಡಿಎಸ್‌ನ 11 ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇರುವ ಹಿನ್ನೆಲೆ ಅಧ್ಯಕ್ಷರಾಗಿ ಕೆ.ಶೇಷಾದ್ರಿ, ಉಪಾಧ್ಯಕ್ಷರಾಗಿ ಆಯಿಷಾ ಬಾನು ಅವಿರೋಧ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ – ರೈತರ ಜಮೀನಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್
Advertisement
Advertisement
ಜೆಡಿಎಸ್‌ಗೆ ಬಹುಮತ ಇಲ್ಲದ ಕಾರಣ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸಿರಲಿಲ್ಲ. ಜೊತೆಗೆ ಇಬ್ಬರು ಜೆಡಿಎಸ್ ಸದಸ್ಯರು ತಟಸ್ಥವಾಗಿದ್ದರಿಂದ ಕಾಂಗ್ರೆಸ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಿಹಿ ತಿನಿಸಿ, ಶುಭಕೋರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಭೇದಿಸಿದ ಪೊಲೀಸರು – 11 ಮಂದಿ ಅರೆಸ್ಟ್
Advertisement