ಬೆಂಗಳೂರು: ಅಪರಿಚಿತನೊಬ್ಬ ಕೇಂದ್ರ ಸಚಿವರ ಹೆಸರಿನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ಕರೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅಂತಾ ಹೇಳಿ ಭಾನುವಾರ ಮಧ್ಯಾಹ್ನ 2 ಬಾರಿ ಕರೆ ಮಾಡಿದ್ದಾನೆ. ಮೊದಲ ಬಾರಿಗೆ ಮಾಡಿದಾಗ ಪರಸ್ಪರ ಆರೋಗ್ಯ ವಿಚಾರಿಸಿದ್ದರು. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದವ್ರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಶಿವಾನಂದ ಪಾಟೀಲ್
ನಂತರ ಅರ್ಧ ಗಂಟೆ ನಂತರ ಮತ್ತೆ ಕರೆ ಮಾಡಿದ ವ್ಯಕ್ತಿ ಅದೇ ರೀತಿ ಮಾತಾಡೋಕೆ ಶುರು ಮಾಡಿದ್ದ. ಈ ವೇಳೆ ಅನುಮಾನಗೊಂಡ ರಾಜ್ಯಪಾಲರು, ಆತನ ಹಿನ್ನೆಲೆ ಬಗ್ಗೆ ಪ್ರಶ್ನೆ ಮಾಡಿದ್ರು. ಆಗ ಏಕಾಏಕಿ ಕಾಲ್ ಕಟ್ ಮಾಡಲಾಗಿದೆ. ಇದನ್ನೂ ಓದಿ: ಗಣೇಶೋತ್ಸವ ಕಲ್ಲು ತೂರಾಟ ಪ್ರಕರಣ; ಪೊಲೀಸ್ ಇಲಾಖೆ ಸಂಪೂರ್ಣ ವಿಫಲ: ವಿಜಯೇಂದ್ರ
ಈ ಬಗ್ಗೆ ಪರಿಶೀಲನೆ ಮಾಡಿದಾಗ ವೇಳೆ ಆತ ಕೇಂದ್ರ ಸಚಿವ ಅಲ್ಲ ನಕಲಿ ವ್ಯಕ್ತಿ ಅನ್ನೊದು ಗೊತ್ತಾಗಿದೆ. ಆತ ಯಾರು? ಯಾವ ಕಾರಣಕ್ಕೆ ಕರೆ ಮಾಡಿದ್ದ ಅನ್ನೋದು ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ಸದ್ಯ ಈ ಸಂಬಂಧ ಕೇಂದ್ರ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.