ವಾಷಿಂಗ್ಟನ್: ಸೂಕ್ತ ಸುರಕ್ಷತೆ ಇಲ್ಲದೆ ಕೊರೊನಾ ಸೋಂಕಿತ ವ್ಯಕ್ತಿಯನ್ನು ತಬ್ಬಿಕೊಳ್ಳುವುದು ಅಥವಾ ಹಸ್ತಲಾಘವ ಮಾಡಲು ಸಾಧ್ಯವಿಲ್ಲ. ಆದರೆ ಹೊಸ ಸಂಶೋಧನೆಯು ಸೆಕ್ಸ್‌ನಿಂದ ಸೋಂಕು ಹರಡುವುದಿಲ್ಲ ಎಂದು ತಿಳಿಸಿದೆ.
ಈ ಕುರಿತು ಇತ್ತೀಚೆಗೆ ಆನ್‍ಲೈನ್ ಜರ್ನಲ್ ‘ಫರ್ಟಿಲಿಟಿ ಅಂಡ್ ಸ್ಟೆರಿಲಿಟಿ’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ. ಕೊರೊನಾ ವೈರಸ್‍ನಿಂದಾಗಿ ಜಗತ್ತಿನಾದ್ಯಂತ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಮಧ್ಯೆ ಚೀನಾದಲ್ಲಿ ಕೊರೊನಾ ಸೋಂಕಿತ 34 ಪುರುಷರಿಂದ ವೀರ್ಯ ಮಾದರಿಗಳನ್ನು ಸಂಶೋಧಕರು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು. ರಿಪೋರ್ಟ್ ನಲ್ಲಿ ಯಾವುದೇ ವೀರ್ಯ ಮಾದರಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಜೊತೆಗೆ ಪುರುಷರ ವೃಷಣಗಳಲ್ಲಿ ವೈರಸ್ ಇರುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ಸಿಗರೇಟ್ ಕೊಡದಿದ್ದಕ್ಕೆ ಬರ್ಬರವಾಗಿ ಕೊಲೆಗೈದ್ರು
Advertisement
Advertisement
“ಈ ಸಣ್ಣ, ಪ್ರಾಥಮಿಕ ಅಧ್ಯಯನದಲ್ಲಿ ಇದು ಕೊರೊನಾ ವೈರಸ್ ವೃಷಣಗಳಲ್ಲಿ ಅಥವಾ ವೀರ್ಯದಲ್ಲಿ ಕಾಣಿಸುವುದಿಲ್ಲ ಎಂಬುದು ಒಂದು ಪ್ರಮುಖ ಶೋಧನೆಯಾಗಿದೆ” ಎಂದು ಅಮೆರಿಕದ ಉತಾಹ್ ವಿಶ್ವವಿದ್ಯಾಲಯದ ಸಹ-ಪ್ರಾದ್ಯಾಪಕ ಡಾ.ಜೇಮ್ಸ್ ಹೊಟಾಲಿಂಗ್ ತಿಳಿಸಿದ್ದಾರೆ.
Advertisement
“ಕೊರೊನಾ ಲೈಂಗಿಕವಾಗಿ ಹರಡಿದರೆ ಅದು ರೋಗ ತಡೆಗಟ್ಟುವಿಕೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಮನುಷ್ಯನಿಗೆ ಸುದೀರ್ಘ ಕಾಲ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು” ಎಂದು ಹೇಳಿದ್ದಾರೆ.
Advertisement
“ಕೋವಿಡ್-19ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಹರಡಬಹುದು. ಇದು ವೀರ್ಯಕ್ಕೆ ಸೋಂಕು ತಗಲುವ ಹೆಚ್ಚಿನ ಸಂಭವನೀಯತೆಗೆ ಕಾರಣವಾಗಬಹುದು. ಅದಕ್ಕೆ ನಮ್ಮಲ್ಲಿ ಈಗ ಉತ್ತರವಿಲ್ಲ” ಎಂದು ಹೊಟಾಲಿಂಗ್ ತಿಳಿಸಿದ್ದಾರೆ.
“ಸಂಶೋಧನೆಗಳ ಹೊರತಾಗಿಯೂ ನಿಕಟ ಸಂಪರ್ಕ, ಕೆಮ್ಮು, ಸೀನುವಿಕೆ ಮತ್ತು ಚುಂಬನದ ಮೂಲಕ ಕೊರೊನಾ ವೈರಸ್ ಹರಡುವ ಅಪಾಯವನ್ನು ಇನ್ನೂ ಹೆಚ್ಚಿಸುತ್ತದೆ. ಕೆಲವು ಸೋಂಕಿತರಿಗೆ ರೋಗಲಕ್ಷಣಗಳು ಕಂಡುಬರುವುದಿಲ್ಲ, ಅವರು ಆರೋಗ್ಯಕರವಾಗಿ ಕಾಣಿಸಬಹುದು. ಆದರೆ ಕೊರೊನಾ ವೈರಸ್ ಅನ್ನು ಇತರರಿಗೆ ಹರಡಬಹುದು” ಎಂದು ಅವರು ಎಚ್ಚರಿಸಿದ್ದಾರೆ.