ಕೈರೋ: ವಿದ್ಯಾರ್ಥಿನಿಯೊಬ್ಬಳು ಯುವಕನನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯನ್ನು ವಿಶ್ವವಿದ್ಯಾಲಯದಿಂದಲೇ ಡಿಬಾರ್ ಮಾಡಿದ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಮಂಡಿಯೂರಿ ಯುವತಿಗೆ ಹೂಗೂಚ್ಚ ನೀಡುವ ಮೂಲಕ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಬಳಿಕ ಯುವಕ ತನ್ನ ಉತ್ಸಾಹವನ್ನು ತಾಳಲಾರದೇ ಯುವತಿಯನ್ನು ತಬ್ಬಿಕೊಂಡಿದ್ದಾನೆ. ಯುವಕನನ್ನು ತಬ್ಬಿಕೊಂಡಿದ್ದಕ್ಕೆ ಯುವತಿ ತನ್ನ ಸಂಸ್ಥೆಯ ಗೌರವವನ್ನು ಹಾಳು ಮಾಡಿದ್ದಾಳೆಂದು ಅಲ್- ಅಜರ್ ವಿಶ್ವವಿದ್ಯಾಲಯ ಆಕೆಯನ್ನು ಡಿಬಾರ್ ಮಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್
Advertisement
Advertisement
ವರದಿಗಳ ಪ್ರಕಾರ ಯುವತಿ ಯುವಕನನ್ನು ತಬ್ಬಿಕೊಂಡ ವಿಡಿಯೋ ಅಲ್-ಅಜರ್ ವಿಶ್ವವಿದ್ಯಾಲಯದಲ್ಲಿ ಸೆರೆಯಾಗಿಲ್ಲ. ಬದಲಿಗೆ ಈ ವಿಡಿಯೋ ಮನ್ಸೌರಾ ವಿಶ್ವವಿದ್ಯಾಲಯದಲ್ಲಿ ಸೆರೆ ಹಿಡಿಯಲಾಗಿದೆ. ಅಲ್ – ಅಜರ್ ಈಜಿಪ್ಟಿನ ಅತ್ಯುನ್ನತ ಸುನ್ನಿ ಮುಸ್ಲಿಂ ಜನಾಂಗದ ಪ್ರಮುಖ ಶಾಖೆಯಾಗಿದ್ದು, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮವಿದೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!
Advertisement
Advertisement
ಈ ವಿಚಾರದ ಬಗ್ಗೆ ಅಲ್-ಅಜರ್ ವಿವಿಯ ವಕ್ತಾರ ಅಹ್ಮದ್ ಜರೈ ಮಾತನಾಡಿ, “ನಾವು ಆ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡಲು ನಿರ್ಧರಿಸಿದ್ದೇವೆ. ವಿಡಿಯೋದಿಂದಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಯುವತಿ ದೇಶದಲ್ಲೇ ಪ್ರತಿಷ್ಠಿತವಾಗಿರುವ ನಮ್ಮ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತಂದಿದ್ದಾಳೆ. ಮದುವೆ ಆಗದ ಯುವಕನನ್ನು ಯುವತಿ ತಬ್ಬಿಕೊಂಡು ಸಮಾಜದ ಮೌಲ್ಯಗಳು ಹಾಗೂ ತತ್ವಗಳನ್ನು ಉಲ್ಲಂಘಿಸಿದ್ದಾಳೆ” ಎಂದು ಹೇಳಿ ವಿವಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv