ಸ್ಯಾನ್ ಫ್ರಾನ್ಸಿಸ್ಕೋ: ಜಪಾನ್‌ಗೆ (japan) ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ಜೆಟ್‌ಲೈನರ್ ಸ್ಯಾನ್ ಫ್ರಾನ್ಸಿಸ್ಕೋದಿಂದ (San Francisco) ಟೇಕಾಫ್ ಆಗಿತ್ತು. ಹೀಗೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಟೈರ್ ಕಳಚಿಬಿದ್ದಿದೆ. ಪರಿಣಾಮ 2 ಕಾರುಗಳು ಜಖಂಗೊಂಡಿವೆ.
ANOTHER Boeing plane inspection gone wrong by diversity hires.
The tire fell off at takeoff.
You can’t tell me this isn’t just neglect and pure laziness at this point.
This is what happens when you hire color instead of qualifications. pic.twitter.com/vhnKf6V831
— Lauren Witzke (@LaurenWitzkeDE) March 7, 2024
Advertisement
ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಟೈರ್ ಕಳಚಿ ಬೀಳುತ್ತಿರುವ ವೀಡಿಯೋ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನವು ತನ್ನ 6 ಟೈಯರ್‌ಗಳಲ್ಲಿ ಒಂದು ಕಳಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಲಾಸ್ ಏಂಜಲೀಸ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
Advertisement
Advertisement
ಈ ಸಂಬಂಧ ವಿಮಾನ ನಿಲ್ದಾಣದ ವಕ್ತಾರ ಡೌಗ್ ಯಾಕೆಲ್ ಅವರು, ಸ್ಯಾನ್ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರುಗಳ ಮೇಲೆ ಟೈರ್ ಬಿದ್ದಿದೆ. ಪರಿಣಾಮ ಕಾರುಗಳು ಜಖಂಗೊಂಡಿವೆ. ಆದರೆ ಯಾರಿಗೂ ಹಾನಿಯಾಗಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ಗೆ ನಿರಾಕರಿಸಿದ್ದ ವ್ಯಕ್ತಿ ಸ್ನೇಹಿತರಿಂದಲೇ ಹತ್ಯೆ – 9 ದಿನಗಳ ನಂತ್ರ ನೀರಿಲ್ಲದ ಕೊಳದಲ್ಲಿ ಶವ ಪತ್ತೆ
Advertisement
ವಿಮಾನದಲ್ಲಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ಘಟನೆ ನಡೆದ ಕೂಡಲೇ ಅವರನ್ನು ಪ್ರಯಾಣಿಕರನ್ನು ಮತ್ತೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಯುನೈಟೆಡ್ ತಿಳಿಸಿದೆ. ಬೋಯಿಂಗ್ 777ಗಳ ಎರಡು ಮುಖ್ಯ ಲ್ಯಾಂಡಿಂಗ್ ಗೇರ್‌ಗಳಲ್ಲಿ ತಲಾ 6 ಟೈರ್‌ಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಕಳಚಿಕೊಂಡಿದೆ ಎಂಬುದಾಗಿ ವರದಿಯಾಗಿದೆ.
ವಿಮಾನಗಳು ಟೈರ್‌ಗಳನ್ನು ಕಳೆದುಕೊಳ್ಳುವುದು ಇದು ಅಪರೂಪದ ಘಟನೆಯಾಗಿದೆ ಎಂದು ವಾಯುಯಾನ ತಜ್ಞರು ಹೇಳಿದ್ದಾರೆ.