ಚಿಕ್ಕಮಗಳೂರು: ಎಲುಬಿಲ್ಲದ ನಾಲಿಗೆ ಏನನ್ನ ಬೇಕಾದರೂ ಹೇಳುತ್ತೆ. ನೆಲೆ ಇಲ್ಲದೇ ಕಾಂಗ್ರೆಸ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಮಾತನಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ಕಿರಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್ ಹಾಗೂ ತಾಲಿಬಾನ್ ಎರಡೂ ಒಂದೇ ಎಂದು ಹೇಳಿದ್ದ ಧೃವನಾರಾಯಣ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮನಸ್ಥಿತಿ ಭಯೋತ್ಪಾದನೆಯನ್ನ ಪ್ರೋತ್ಸಾಹಿಸುತ್ತೆ. ಅದಕ್ಕೆ ಕಾಂಗ್ರೆಸ್ಸಿಗರು ಕಾಶ್ಮೀರದ ಸಮಸ್ಯೆಯನ್ನ ಜೀವಂತವಾಗಿ ಇಟ್ಟಿದ್ದರು. ಸದ್ಯ ಕಾಶ್ಮೀರದ ಸಮಸ್ಯೆ ಹೋಗಿ ಭಯೋತ್ಪಾದಕರ ಹುಟ್ಟು ಅಡಗಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಸರ್ಕಾರ ಆ ಕೆಲಸ ಮಾಡಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಯಾರು ದೇಶದ್ರೋಹಿಗಳು, ಯಾರು ದೇಶಭಕ್ತರು ಅನ್ನೋದು ಜನರಿಗೆ ಗೊತ್ತು. ಅವರೇ ಉತ್ತರಿಸುತ್ತಾರೆ ಎಂದರು.
Advertisement
Inaugurated a Workshop to educate our GP Presidents, Members & PDOs on various schemes of Rural Development Dept.
State & Central Govt have announced many pro-people schemes & working towards achieving the sustainable development goals from village level.#SKinConstituency pic.twitter.com/1f9gawBud5
— Shobha Karandlaje (@ShobhaBJP) August 24, 2021
Advertisement
ಇದೇ ವೇಳೆ, ಅಫ್ಘಾನಿಸ್ತಾನದಲ್ಲಿ ಒಂದು ರೀತಿಯ ಕ್ಷೋಭೆ ನಿರ್ಮಾಣವಾಗಿದೆ. ಜಗತ್ತೆ ನಿರೀಕ್ಷೆ ಮಾಡದ ರೀತಿಯಲ್ಲಿ ಭಯೋತ್ಪಾದಕರು ಹೇಗೆ ಮಾಡಬಹುದು ಎಂದು ಜಗತ್ತಿಗೆ ತೋರಿಸುತ್ತಿದ್ದಾರೆ. ನಮ್ಮ ದೇಶವೂ ಎಚ್ಚೆತ್ತುಕೊಳ್ಳಬೇಕಾದ ಸಂದರ್ಭ ಇದು. ದೇಶದಲ್ಲಿರುವ ಭಯೋತ್ಪಾದಕತೆಯನ್ನ ಭಯೋತ್ಪಾದಕದ ಮನಸ್ಸುಗಳಿಗೆ ಬೆಂಬಲ ಕೊಡುವ ಭಾರತೀಯರನ್ನ ಕೂಡ ಗಮನಿಸಬೇಕು, ನಿಗಾವಹಿಸಬೇಕು, ಅವರನ್ನ ಶಿಕ್ಷೆಗೆ ಒಳಪಡಿಸಬೇಕು. ಆಗ ಮಾತ್ರ ಭಯೋತ್ಪಾದಕತೆಯನ್ನ ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು. ಇದನ್ನೂ ಓದಿ: ಕಾಬೂಲ್‍ನಿಂದ ಉಕ್ರೇನ್ ವಿಮಾನ ಹೈಜಾಕ್
Advertisement
Advertisement
ಅಲ್ಲಿರುವ ಎಲ್ಲಾ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಭಾರತೀಯರನ್ನ ಏರ್ ಲಿಫ್ಟ್ ಮಾಡುವಂತಹಾ ಕೆಲಸವೂ ನಡೆಯುತ್ತಿದೆ. ಅವರೆಲ್ಲರ ರಕ್ಷಣೆಗೂ ಭಾರತ ಸರ್ಕಾರ ಬದ್ಧವಿದೆ. ಅಫ್ಘಾನಿಸ್ತಾನದ ನಾಗರೀಕರ ಜೊತೆ ಭಾರತ ಸರ್ಕಾರ ಇರುತ್ತೆ ಎಂದಿದ್ದಾರೆ. ಭಾರತೀಯರ ಜೊತೆ ಕೇಂದ್ರ ಸರ್ಕಾರ ನಿಂತಿದ್ದು.ಅವರನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ಮುಂಚೂಣಿಯಲ್ಲಿ ನಿಂತಿದೆ ಎಂದು ತಿಳಿಸಿದರು. ಇದನ್ನೂ ಓದಿ: ತಾಲಿಬಾನ್ ಬೆಂಬಲಿಸುವ ಸಂಸ್ಕೃತಿಯನ್ನ ಕಾಂಗ್ರೆಸ್ ಬಿಡಲಿ: ಕೋಟ ಶ್ರೀನಿವಾಸ್ ಪೂಜಾರಿ