ಬೆಂಗಳೂರು: ವಾಣಿಜ್ಯ ಕಲ್ಲಿದ್ದಲು ಬ್ಲಾಕ್‌ಗಳ ಹರಾಜು ಹಾಗೂ ಗಣಿಗಾರಿಕೆಯಲ್ಲಿ ಹೂಡಿಕೆ ಅವಕಾಶಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ನಡೆಯುತ್ತಿರುವ ಹೂಡಿಕೆದಾರರ ಸಮಾವೇಶವನ್ನು ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಉದ್ಘಾಟಿಸಿದರು. ಈ ವೇಳೆ ಹೂಡಿಕೆದಾರರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜಿಡಿಪಿಗೆ ಗಣಿಗಾರಿಕೆಯಿಂದಲೇ ಶೇ. 2.5ರಷ್ಟು ಕೊಡುಗೆ ನೀಡಲಿದ್ದೇವೆ ಎಂದು ಹೇಳಿದರು.
ಭಾರತದ (India) ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕಲ್ಲಿದ್ದಲು ಸೇರಿದಂತೆ ಗಣಿಗಾರಿಕೆಯಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. 2047ರ ವೇಳೆಗೆ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದ್ದು, ಹೇರಳವಾದ ವಿದ್ಯುತ್ ಉತ್ಪಾದನೆ ಅಗತ್ಯವಾಗಿದೆ. ಸಹಜವಾಗಿ ಕಲ್ಲಿದ್ದಲು ಬೇಡಿಕೆ ಕೂಡ ಹೆಚ್ಚಲಿದ್ದು, ಹೂಡಿಕೆದಾರಿಗೆ ಕಲ್ಲಿದ್ದಲು ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ದೇಶದ ಇಂಧನ ಹಾಗೂ ಖನಿಜ ಸಂಪತ್ತಿನ ಸುರಕ್ಷತೆಯನ್ನು ಕಾಪಾಡಲು ನಮ್ಮಲ್ಲಿರುವ ಕಲ್ಲಿದ್ದಲು ಹಾಗೂ ಖನಿಜ ಸಂಪನ್ಮೂಲದ ಸುಸ್ಥಿರ ಉಪಯೋಗ ಅವಶ್ಯಕವಾಗಿದೆ. ಈ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ಹೂಡಿಕೆಯ ಅವಶ್ಯಕತೆ ಇದ್ದು, ಆಸಕ್ತ ಹೂಡಿಕೆದಾರರೊಂದಿಗೆ ನಾವು ನಿರಂತರ ಚರ್ಚೆಯಲ್ಲಿ ತೊಡಗುವ ಉದ್ದೇಶದಿಂದಲೇ ಈ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದೇವೆ ಎಂದು ಹೇಳಿದರು.
Advertisement
Advertisement
ಪ್ರಸ್ತುತ ನಡೆಯುತ್ತಿರುವ ಕಲ್ಲಿದ್ದಲು ಹಾಗೂ ಖನಿಜಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ 7 ಕಲ್ಲಿದ್ದಲು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಆರನೇ ಕಂತಿನ 141 ಕಲ್ಲಿದ್ದಲು ಬ್ಲಾಕ್‌ಗಳು ಕೂಡ ಹರಾಜಿಗೆ ಲಭ್ಯವಿದೆ ಎಂದರು ತಿಳಿಸಿದರು. ಇದನ್ನೂ ಓದಿ: ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು
ಇಂದಿನ ಗಣಿ ಮತ್ತು ಕಲ್ಲಿದ್ದಲು ಹೂಡಿಕೆದಾರರ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಪ್ರಮುಖ ಗಣ್ಯರು, ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಹೂಡಿಕೆದಾರರು ಉಪಸ್ಥಿತರಿದ್ದರು. ಇದನ್ನೂ ಓದಿ: ನಾನೂ ರೌಡಿ, ಬಿಜೆಪಿಗೆ ನನ್ನನ್ನು ಸೇರಿಸಿಕೊಳ್ಳಿ – ಏಕಾಂಗಿ ಪ್ರತಿಭಟನೆ ನಡೆಸಿದ ಪಾನಿಪುರಿ ಮಂಜು