ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ಧರಿಸಿ ಚಿಕ್ಕಮಗಳೂರು (Chikkamagaluru) ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಿಜೆಪಿ ಶಾಸಕ ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಮೊನ್ನೆ ಕಾಫಿನಾಡಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಸಿ.ಟಿ.ರವಿ (CT Ravi) ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Congress) ಸಿದ್ದರಾಮುಲ್ಲಾ ಖಾನ್ ಎಂದಿದ್ದರು. ಆ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸಿ.ಟಿ.ರವಿ ವಿರುದ್ಧ ಕೆಂಡವಾಗಿತ್ತು. ಹಾಗಾಗಿ, ಇಂದು ಕಾಂಗ್ರೆಸ್ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಬಂದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ಮಾರ್ಗ ಮಧ್ಯೆಯೇ ತಡೆದರೂ ಕೂಡ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ರೆಬಲ್ ಆಗಿದ್ದು, ಬನ್ರೋ, ಬನ್ನಿ ಎಂದು ರಸ್ತೆ ಮಧ್ಯೆಯೇ ನಿಂತಿದ್ದರು. ಇಬ್ಬರನ್ನೂ ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸಪಟ್ಟರು.
Advertisement
Advertisement
ಯಾವಾಗ ಕಾಂಗ್ರೆಸ್ ಕಾರ್ಯಕರ್ತರು ಮನೆಗೆ ಹಾಕ್ತೀವಿ ಅಂದ್ರೋ ಬಿಜೆಪಿ ಕಾರ್ಯಕರ್ತರು ಕೂಡ ಎಲ್ಲದ್ಧಕ್ಕೂ ಸನ್ನದ್ದರಾಗಿದ್ದರು. ಸಿ.ಟಿ.ರವಿ ಮನೆಯ ಮುಂಭಾಗ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾವಲಿಗೆ ನಿಂತರೆ, ಮತ್ತೊಂದಿಷ್ಟು ಜನ ಸಿ.ಟಿ.ರವಿ ಮನೆಯಿಂದ 200 ಮೀ. ದೂರದಲ್ಲಿ ಜಮಾಯಿಸಿದರು. ಇದನ್ನೂ ಓದಿ: ಚಿರತೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
Advertisement
Advertisement
ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿಯಿಂದ 50 ಮೀಟರ್ ಹೋಗುತ್ತಿದ್ದಂತೆ ಪೊಲೀಸರೇ ತಡೆದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಹೊಗೋದಕ್ಕೆ ಯತ್ನಿಸಿದಾಗ ಬಿಜೆಪಿಗರು ಬ್ಯಾರಿಕೇಡ್ ತಳ್ಳಿ ನುಗ್ಗೋದಕ್ಕೆ ಯತ್ನಿಸಿದರು. ಇಷ್ಟೆಲ್ಲಾ ಹೈಡ್ರಾಮದ ಮಧ್ಯೆ ನಾಲ್ಕೈದು ಕಾಂಗ್ರೆಸ್ ಕಾರ್ಯಕರ್ತರು ಮತ್ತೊಂದು ಮಾರ್ಗದಲ್ಲಿ ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಿಜೆಪಿ ಮಾಜಿ ನಗರಸಭೆ ಸದಸ್ಯ ಪುಷ್ಪರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಪೊಲೀಸರು ಎಲ್ಲರನ್ನೂ ವಾಪಸ್ ಕಳಿಸಿದ್ದಾರೆ. ಬಳಿಕ ಪೊಲೀಸರ ಪರಿಸ್ಥಿತಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಕಾರ್ಯಕರ್ತನ್ನ ಬಂಧಿಸಿದ ಬಳಿಕ ಪರಿಸ್ಥಿತಿ ಶಾಂತತಗೊಂಡಿದೆ. ಇದನ್ನೂ ಓದಿ: ಯಾವುದೇ ವ್ಯಕ್ತಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲ್ಲ – ರಾವಣ ಹೇಳಿಕೆಗೆ ಖರ್ಗೆ ಸ್ಪಷ್ಟನೆ