ನವದೆಹಲಿ: ಆಯುರ್ವೇದ ಆಹಾರ ಪಥ್ಯದಿಂದಾಗಿ (Ayurvedic diet) ಕೇಂದ್ರ ಸಚಿವ (Union Minister) ಕೌಶಲ್ ಕಿಶೋರ್ (Kaushal Kishore) ಅವರು 22 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ತೂಕ ಕಡಿಮೆ (Weight Loss) ಮಾಡಿಕೊಂಡಿರುವ ವಿಷಯವನ್ನು ಖುದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಸಚಿವರು ತಮ್ಮ ಮೊದಲ ಹಾಗೂ ನಂತರದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ತೂಕ ಇಳಿಸಲು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಪ್ರವೇಶ ಪಡೆದೆ. ಅದಾದ ಬಳಿಕ ಸಂಸ್ಥೆಯ ಸೂಚಿಸಿದ ಆಹಾರ ಕ್ರಮವನ್ನು ಅನುಸರಿಸಲು ಪ್ರಾರಂಭಿಸಿದೆ. ಇದರಿಂದಾಗಿ 2021ರ ಮೊದಲು 96 ಕೆಜಿ ಇದ್ದ ನಾನು, ಈಗ 22 ಕೆಜಿ ಕಳೆದುಕೊಂಡು 74 ತೂಕ ಹೊಂದಿದ್ದೇನೆ. ನಾನು ಮೊದಲಿಗಿಂತ ಫಿಟ್ ಆಗಿದ್ದೇನೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಬುರುಡೆ, ಬೊಗಳೆ ಬಿಟ್ಕೊಂಡು ಓಡಾಡಿದವರಿಗೆ ಚಾಮುಂಡೇಶ್ವರಿ ಜನ ಪಾಠ ಕಲಿಸಿದ್ದಾರೆ: ಸಿದ್ದುಗೆ ಸಿಂಹ ತಿರುಗೇಟು
2021 से पहले मेरा वजन 96 kg था फिर आदरणीय प्रधानमंत्री श्री @narendramodi जी के आदेश पर “अखिल भारतीय आयुर्वेद संस्थान नई दिल्ली” में भर्ती होने के बाद और डाक्टरों द्वारा बताए गए नियमित भोजन से अब मेरा वजन 22 kg घटकर 74 kg हो गया है..
अब मैं पहले से ज्यादा फिट हूं… pic.twitter.com/n0FKOCkm9T
— Kaushal Kishore (@mp_kaushal) March 5, 2023
ಆಯುರ್ವೇದದಿಂದ ತೂಕ ಇಳಿಕೆ: ಪ್ರಾಚೀನ ಭಾರತೀಯ ವಿಜ್ಞಾನದ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು, ಅಧಿಕ ಕಫ ದೋಷದ ಕಾರಣದಿಂದ ಉಂಟಾಗುತ್ತದೆ. ಆದ್ದರಿಂದ ಕೆಲವು ಪಥ್ಯಗಳನ್ನು ಅನುಸರಿಸುವ ದೇಹದ ಬೊಜ್ಜನ್ನು ಕರಗಿಸಬಹುದು. ಆಯುರ್ವೇದ ತಜ್ಞರ ಪ್ರಕಾರ, ಕಫ ದೋಷವಿರುವ ಜನರು ಹಸಿವಿನಿಂದ ಬಳಲಬಾರದು ಬದಲಿಗೆ ಅವರ ದೇಹ ಪ್ರಕಾರ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತಿನ್ನಬೇಕು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ ಕೇಸ್ – ಎರಡೂವರೆ ತಿಂಗಳ ಬಳಿಕ ಶಾರೀಕ್ ಡಿಸ್ಚಾರ್ಜ್