ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಶುಕ್ರವಾರ ಬೆಂಗಳೂರಿನ ವಿವಿ ಪುರಂಗೆ ಭೇಟಿ ನೀಡಿದ್ದು, ಸ್ಥಳೀಯ ಬೇಕರಿ ಹಾಗೂ ಫುಡ್ ಸ್ಟ್ರೀಟ್‌ನಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ತಿಂಡಿಗಳನ್ನು ಸವಿದಿದ್ದಾರೆ. ಜೈಶಂಕರ್ ಅವರಿಗೆ ಸಚಿವ ಅಶ್ವಥ್ ನಾರಾಯಣ್ ಅವರು ಸಾಥ್ ನೀಡಿದ್ದಾರೆ.
ಫುಡ್ ಸ್ಟ್ರೀಟ್‌ನಲ್ಲಿ ವಿವಿಧ ತಿಂಡಿಗಳನ್ನು ಸವಿದು ಗ್ರಾಹಕರು ಹಾಗೂ ಅಂಗಡಿ ಮಾಲೀಕರೊಂದಿಗೆ ಜೈಶಂಕರ್ ಮಾತುಕತೆಯನ್ನೂ ನಡೆಸಿದ್ದಾರೆ. ಇದು ನನಗೆ ಒಳ್ಳೆಯ ಅನುಭವವನ್ನು ತಂದು ಕೊಟ್ಟಿದೆ. ಈ ಭಾಗದ ಆಹಾರ ತುಂಬಾ ಚೆನ್ನಾಗಿತ್ತು. ದೇಶದ ಪ್ರಧಾನಿ ಪ್ರವಾಸೋದ್ಯಮವನ್ನು ಬೆಂಬಲಿಸಲು ಹೇಳಿದ್ದಾರೆ. ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಮತ್ತೊಮ್ಮೆ ಈ ಭಾಗಕ್ಕೆ ಬರಲು ಇಷ್ಟಪಡುತ್ತೇನೆ. ಇಲ್ಲಿನ ಆಹಾರ ತುಂಬಾ ಚೆನ್ನಾಗಿತ್ತು ಎಂದು ಕನ್ನಡದಲ್ಲಿಯೇ ನುಡಿದಿದ್ದಾರೆ. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ
ಬಳಿಕ ಮಾತನಾಡಿದ ಜೈಶಂಕರ್, ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಬೇಕೆಂದು ಇಡೀ ದೇಶ ಹೇಳುತ್ತಿದೆ. ನಾನಿರುವ ಜಾಗದಿಂದಲೇ ನಾಳೆ ತ್ರಿವರ್ಣ ಧ್ವಜ ಹಾರಿಸುತ್ತೇವೆ. ನಾಳೆಯಿಂದ 3 ದಿನಗಳ ಕಾಲ ದೇಶದ ಎಲ್ಲಾ ಭಾಗಗಳಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಪ್ರತಿ ಮನೆ ಮೇಲೂ, ಪ್ರತಿಯೊಬ್ಬರ ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು ಎಂದರು.
ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಇದು ರಾಷ್ಟ್ರೀಯತೆಯ ಸಂಕೇತ. ಮೋದಿ ಅವರ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಅವರ ಅಭಿಯಾನದಿಂದ ದೇಶವೇ ಒಂದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು