ನವದೆಹಲಿ: ಆಪರೇಷನ್ ಗಂಗಾ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರ ಉಕ್ರೇನ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತಂದಿದೆ. ಈ ನಡುವೆ ಅನೇಕ ಮಂದಿ ತಮ್ಮ ಅಚ್ಚು-ಮೆಚ್ಚಿನ ಸಾಕು ಪ್ರಾಣಿಗಳನ್ನು ಭಾರತಕ್ಕೆ ಕರೆತಂದಿದ್ದಾರೆ.
Advertisement
ಸದ್ಯ ಕಾರ್ಕಿವ್‍ನಿಂದ ದೆಹಲಿಗೆ ಬಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಂಜಿತ್ ರೆಡ್ಡಿ ಅವರು ಒಂದು ವರ್ಷ ನಾಲ್ಕು ತಿಂಗಳ ಹೈಬ್ರೀಡ್ ನಾಯಿಯನ್ನು ಜೊತೆಗೆ ಕರೆದೊಯ್ದಿದ್ದಾರೆ. ನೋಡಲು ಸಿಂಹದಂತಿರುವ ಈ ಶ್ವಾನವನ್ನು ಭಾರತಕ್ಕೆ ಕರೆದುಕೊಂಡು ಬರಲು ಹರಸಾಹಸ ಪಟ್ಟಿದ್ದಾರೆ. ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ರಂಜಿತ್ ನಾಯಿ ತರಲು ಪಟ್ಟ ಕಷ್ಟವನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಮಧ್ಯೆ ಕೆಟ್ಟು ನಿಂತ ಬಸ್ – ರೊಮೆನಿಯಾ ತಲುಪದ 37 ಕನ್ನಡಿಗರು
Advertisement
Advertisement
ರಂಜಿತ್ ಹೇಳಿದ್ದೇನು?
ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಈ ನಾಯಿಯನ್ನು ನಾನು ಬಹಳ ಇಷ್ಟಪಟ್ಟು ಖರೀದಿಸಿದೆ. ಇದನ್ನು ನಾನು ಉಕ್ರೇನ್‍ನಲ್ಲಿಯೇ ಬಿಟ್ಟು ಬರಲು ಇಷ್ಟವಿರಲಿಲ್ಲ. ನನ್ನ ಜೊತೆ ಒಂದು ವರ್ಷದಿಂದ ಈ ನಾಯಿ ಇದ್ದು, ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗುವುದಿಲ್ಲ. ಹಾಗಾಗಿ ಹೇಗಾದರೂ ನಾಯಿಯನ್ನು ನನ್ನ ಜೊತೆಗೆ ಕರೆದುಕೊಂಡು ಬರಲೆಬೇಕೆಂದು ನಿರ್ಧರಿಸಿದೆ.
Advertisement
ನಂತರ ಕಾರ್ಕಿವ್‍ನಿಂದ ಗಡಿಗೆ ಮೂರು ದಿನಗಳವರೆಗೆ ಕಾರಿನಲ್ಲಿ ನಾವು ಪ್ರಯಾಣಿಸಿದೆವು. ಬಳಿಕ ನಮ್ಮ ರಾಯಭಾರ ಕಚೇರಿ ಅವರು ಮನುಷ್ಯರಷ್ಟೇ ಅಲ್ಲದೇ ಪ್ರಾಣಿಗಳನ್ನು ಸಹ ಭಾರತಕ್ಕೆ ಕರೆದುಕೊಂಡು ಬರಲು ಸಹಾಯ ಮಾಡಿದರು. ಸಚಿವ ಹಾರ್ದಿಕ್ ಸಿಂಗ್ ಪೂರಿ ಅವರು ನಾಯಿಯನ್ನು ಕರೆದುಕೊಂಡು ಬರಲು ನಮಗೆ ಬಹಳ ಸಹಾಯ ಮಾಡಿದರು. ಒಂದು ವೇಳೆ ನಾಯಿ ಬರಲು ಅವಕಾಶ ನೀಡದಿದ್ದರೆ ನಾನು ಸಹ ಭಾರತಕ್ಕೆ ಬರುತ್ತಿರಲಿಲ್ಲ. ಇದನ್ನೂ ಓದಿ :ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್
ಯುದ್ಧದ ಸಂದಭದಲ್ಲಿ ಜನರನ್ನು ಸ್ಥಳಾಂತರಿಸುವ ವಿಮಾನದಲ್ಲಿ ಪ್ರಾಣಿಗಳನ್ನು ತರಲು ಅವಕಾಶವಿಲ್ಲ. 3 ಜನರ ಜಾಗ ನಾಯಿಗೆ ಬೇಕಿದ್ದ ಕಾರಣ ಎರಡು ವಿಮಾನವನ್ನು ಬಿಟ್ಟಿದ್ದೆ. ಈ ವೇಳೆ ನಾಯಿ ಮತ್ತು ನಾನು ಕೆಳಗಡೆ ಕುಳಿತುಕೊಂಡು ಬರುತ್ತೇನೆ ಎಂದು ಹೇಳಿದ್ದೆ. ಕೊನೆಗೆ ಸಚಿವರು ವಿಶೇಷ ಮನವಿ ಮಾಡಿ ವಿಮಾನದ ಮೂಲಕ ಬರಲು ಸಹಾಯ ಮಾಡಿದರು.
ಇದೊಂದು ಒರಿಜಿನಲ್ ಚೌಚೌ ಬ್ರಿಡ್. ಇದರ ಒಂದು ಮರಿ 1 ಲಕ್ಷ ರೂ. ಅಥವಾ 2 ಲಕ್ಷ ರೂ.ಗಳಷ್ಟು ಬೆಲೆ ಬಾಳುತ್ತದೆ. ಲಂಡನ್‍ನಲ್ಲಿ ಈ ನಾಯಿಯ ಬೆಲೆ 3-4 ಲಕ್ಷ ಆಗಿದ್ದು, ಹಲವಾರು ಮಂದಿ ನಾಯಿಯನ್ನು ತಮಗೆ ಮಾರುವಂತೆ ಕೇಳಿದರು. ಆದರೆ ನಾನು ಯಾರಿಗೂ ನೀಡಲಿಲ್ಲ. ಈ ಶ್ವಾನ ದಿನಕ್ಕೆ 5 ರಿಂದ 10 ಬಾರಿ ಊಟ ಮಾಡುತ್ತದೆ. ಅದರಲ್ಲಿಯೂ ಮೊಟ್ಟೆ, ರೈಸ್ ಬಹಳ ಇಷ್ಟ ಎಂದು ತಿಳಿಸಿದರು.
ಇದೇ ವೇಳೆ ಉಕ್ರೇನ್ ಪರಿಸ್ಥಿತಿ ಕಣ್ಣಲ್ಲಿ ನೀರು ತರಿಸುವಂತಿದ್ದು, ಉಕ್ರೇನ್ ಪರಿಸ್ಥಿತಿ ಸುಧಾರಿಸಲು ಇನ್ನೂ 3 ಅಥವಾ 6 ತಿಂಗಳು ಬೇಕಾಗುತ್ತದೆ ಎಂದರು. ನಂತರ ನವೀನ್ ಸಾವಿನ ಕುರಿತಂತೆ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ : ಕಬ್ಜ ಟೀಮ್ ಸೇರಿಕೊಂಡ ಶ್ರೀಯಾ ಶರಣ್ : ಉಪೇಂದ್ರಗೆ ಶ್ರೀಯಾ ನಾಯಕಿ?