ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) 14 ಮುಡಾ ಸೈಟ್‌ಗಳನ್ನ ಜಲದರ್ಶಿನಿ ಗೆಸ್ಟ್ ಹೌಸ್‌ನಲ್ಲಿ ಸಬ್ ರಿಜಿಸ್ಟರ್ ಕರೆದುಕೊಂಡು ಬಂದು ಒಂದೇ ದಿನದಲ್ಲಿ ಸಿದ್ದರಾಮಯ್ಯ ಪತ್ನಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆರೋಪ ಮಾಡಿದರು.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಮುಡಾ ಕೇಸ್‌ನಲ್ಲಿ ಸಿಎಂಗೆ 62 ಕೋಟಿ ಕೊಡಬೇಕಂತೆ. ಯಾರಪ್ಪನ ಆಸ್ತಿ ಅಂತಾ ಕೊಡಬೇಕು ಸಿಎಂ ಅವರೇ? ಆ ಜಮೀನು ಸಿದ್ದರಾಮಯ್ಯ ಪಿತ್ರಾರ್ಜಿತ ಆಸ್ತಿನಾ, ಸಿದ್ದರಾಮಯ್ಯ ಹೆಂಡತಿ ತಮ್ಮನ ಪಿತ್ರಾರ್ಜಿತ ಆಸ್ತಿನಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್ ಮಾಡಿದ್ರು: ಹೆಚ್‌ಡಿಕೆ ಕಿಡಿ
Advertisement
Advertisement
ಮುಡಾ ಅಕ್ರಮದ ಕುರಿತು ದಾಖಲಾತಿ ತೋರಿಸಿ ಅಕ್ರಮದ ಬಗ್ಗೆ ಕಿಡಿಕಾರಿದರು. ಮುಡಾ ಪ್ಲ್ಯಾನ್ ಆಗಿದ್ದು ಯಾವಾಗ? ಭೂಮಿ ಖರೀದಿ ಮಾಡಿದ್ದು ಯಾವಾಗ? ಯಾವ ಯಾವ ವರ್ಷದಲ್ಲಿ ಏನೆಲ್ಲ ಆಯ್ತು ಅಂತಾ ದಾಖಲಾತಿ ಸಮೇತ ಬಿಚ್ಚಿಟ್ಟರು.
Advertisement
ಸಿದ್ದರಾಮಯ್ಯ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಅಕ್ರಮ ಎಸಗಿದ್ದಾರೆ. ಈಗ ತಮ್ಮ ಮೇಲೆ ಆರೋಪ ಬಂದಿರೋದಕ್ಕೆ ನಾನು ಹಿಂದುಳಿದ ವರ್ಗದವನು ನಾನು ಸಿಎಂ ಆಗಿದ್ದು ವಿಪಕ್ಷಗಳಿಗೆ ತಡೆಯೋಕೆ ಆಗದೇ ಆರೋಪ ಮಾಡ್ತಿದ್ದಾರೆ ಅಂತ ಹೇಳ್ತಾರೆ. ಹಿಂದುಳಿದವರಿಗೆ ಇವರು ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ
Advertisement
ಇದು ಸಿಎಂ ಕುಟುಂಬದಲ್ಲಿ ನಡೆದಿರೋ ಹಗರಣ, ಇದರಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಈಗ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಮಾಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಎಷ್ಟೇ ದಾಖಲಾತಿ ಬಿಡುಗಡೆ ಮಾಡಿದ್ರು ಇವರು ಏನು ಮಾಡೊಲ್ಲ. ಹೀಗಾಗಿ ರಾಜ್ಯದ ಗೌರವಾನ್ವಿತ ಯಾರಾದರೂ ವಕೀಲರು ರಾಜ್ಯಪಾಲರಿಂದ ಸಿಎಂ ವಿರುದ್ಧ ತನಿಖೆಗೆ ಅನುಮತಿ ಪಡೆದು ಈ ಹಗರಣವನ್ನ ಕೋರ್ಟ್ ಮೂಲಕವೇ ಬಯಲಿಗೆ ಎಳೆಯಬೇಕು ಎಂದು ಮನವಿ ಮಾಡಿದರು.