– ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಫುಲ್ ಸೇಫ್
ಯಾದಗಿರಿ: ಕೇಂದ್ರ ಸಚಿವ ಭಗವಂತ್ ಖೂಬಾ ಸ್ವಾಗತಕ್ಕೆ ನಾಡಬಂದೂಕು ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಿನ್ನೆಲೆ ಮೂವರು ಪೊಲೀಸ್ ಕಾನ್‍ಸ್ಟೇಬಲ್‍ಗಳನ್ನು ಅಮಾನತು ಮಾಡಲಾಗಿದೆ.
Advertisement
ಗ್ರಾಮೀಣ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ಗಳಾದ ವಿರೇಶ್, ಸಂತೋಷ್ ಹಾಗೂ ಮೈಬೂಬ್ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಎಸ್‍ಪಿ ಡಾ.ವೇದಮೂರ್ತಿ ಮಾಹಿತಿ ಮಾಧ್ಯಮಗಳಿಗೆ ನೀಡಿದ್ದಾರೆ. ಬಂದೂಕು ವ್ಯವಸ್ಥೆ ಮಾಡಿದ್ದ ಮಾಜಿ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ
Advertisement
Advertisement
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರೇ ಬಂದೂಕು ವ್ಯವಸ್ಥೆ ಮಾಡಿದ್ದರು. ಆದರೂ ಅಮಾಯಕ ರೈತರ ಮೇಲೆ ಕೇಸ್ ಹಾಕಿ, ಅಮಾಯಕ ಪೊಲೀಸ್ ಕಾನ್‍ಸ್ಟೇಬಲ್ ಗಳಿಗೆ ಎಸ್‍ಪಿ ಸಸ್ಪೆಂಡ್ ಶಿಕ್ಷೆ ನೀಡಿದ್ದಾರೆ. ಚಿಂಚನಸೂರ ವಿಷಯದಲ್ಲಿ ಮಾತ್ರ ತುಟಿ ಬಿಚ್ಚುತ್ತಿಲ್ಲ. ರಾಜಕೀಯ ನಾಯಕರನ್ನು ಬಿಟ್ಟು ಅಮಾಯಕರನ್ನು ಶಿಕ್ಷೆಗೆ ಒಳಪಡಿಸಿದ ಎಸ್‍ಪಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ
Advertisement
ಜನಾರ್ಶೀವಾದ ಕಾರ್ಯಕ್ರಮಕ್ಕೆ ಯಾದಗಿರಿಗೆ ಆಗಮಿಸಿದ್ದ ಕೇಂದ್ರ ಸಚಿವ ಖೂಬಾ ಅವರನ್ನು ಜನ ನಾಡಬಂದೂಕು ಸಿಡಿಸಿ ಭರ್ಜರಿಯಾಗಿ ಸ್ವಾಗತ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಯರಗೋಳ ಗ್ರಾಮದಲ್ಲಿ ಜನ ಕೇಂದ್ರ ಸಚಿವ ಭಗವಂತ ಖೂಬಾ ಆಗಮನ ಮಾಡುತ್ತಿದ್ದಂತೆ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಪುಷ್ಪವನ್ನು ಅರ್ಪಿಸಿ ಭರ್ಜರಿ ಸ್ವಾಗತ ಮಾಡಿದ್ದರು. ಯಾದಗಿರಿ ತಾಲೂಕಿನ ಯರಗೋಳ ಗ್ರಾಮಕ್ಕೆ ಖೂಬಾ ಆಗಮಿಸಿದ್ದರು.