– ತಂಪು ಪಾನಿಯಾಗಳು ಕಾಸ್ಟ್ಲಿಯೋ ಕಾಸ್ಟ್ಲಿ
ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲಿಗೆ ಅಕ್ಷಯ ಪಾತ್ರೆ ಎನಿಸಿರುವ ಪೆಟ್ರೋಲ್, ಡೀಸೆಲ್ ಬೆಲೆಗಳು ಯಥಾ ರೀತಿ ಮುಂದುವರಿಯಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ(GST) ವ್ಯಾಪ್ತಿಗೆ ತರಲು ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳು ಒಕ್ಕೊರಲಿನಿಂದ ತೀವ್ರವಾಗಿ ವಿರೋಧಿಸಿದ ಕಾರಣ, ಇಂದು ಲಖನೌನಲ್ಲಿ ನಡೆದ ಜಿಎಸ್‍ಟಿ ಕೌನ್ಸಿಲ್‍ಯಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಬದಲಿಗೆ, ಪೆಟ್ರೋಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ಬಗ್ಗೆ ಚರ್ಚಿಸಲು ಇದು ಸಮಯವೂ ಅಲ್ಲ ಎಂದು ಜಿಎಸ್‍ಟಿ ಕೌನ್ಸಿಲ್ ಅಭಿಪ್ರಾಯಪಟ್ಟಿದೆ.
Advertisement
ಇದೇ ವೇಳೆ, ಕಬ್ಬಿಣ, ಅಲ್ಯೂಮಿನಿಯಂ, ಮ್ಯಾಂಗನೀಸ್, ತಾಮ್ರ, ನಿಖಲ್, ಸೀಸ, ನಿಕಲ್, ಕೋಬಾಲ್ಟ್, ಜಿಂಕ್, ಟಿನ್ ಕ್ರೋಮಿಯಂ ಅದಿರು ಮತ್ತು ಕಚ್ಚಾ ಲೋಹಗಳ ಮೇಲೆ ಶೇ.5ರ ಬದಲು ಶೇ.18ಕ್ಕೆ ಜಿಎಸ್‍ಟಿ(Goods and Services Tax) ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದ್ರಿಂದಾಗಿ ಕಟ್ಟಡ ಕಾಮಗಾರಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆಗಳು ಇನ್ನಷ್ಟು ದುಬಾರಿ ಆಗಲಿವೆ. ಇದೇ ವೇಳೆ, ಕಾರ್ಬೋನೇಟೆಡ್ ಫ್ರೂಟ್ ಜ್ಯೂಸ್, ತಂಪು ಪಾನಿಯ ಮೇಲೆ ಶೇ.28ರಷ್ಟು ಜಿಎಸ್‍ಟಿ ಜೊತೆಗೆ ಶೇ.12ರಷ್ಟು ಪರಿಹಾರ ಸೆಸ್ ವಿಧಿಸಲು ತೀರ್ಮಾನಿಸಿದೆ. ಇದನ್ನೂ ಓದಿ: ವ್ಯಾಕ್ಸಿನ್ ಭಾರತ ಮಹಾನ್ – 9 ಗಂಟೆಯಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಲಸಿಕೆ!
Advertisement
Lucknow | Union Finance Minister Nirmala Sitharaman chairs the 45th meeting of the GST Council pic.twitter.com/0cpbtlogov
— ANI UP/Uttarakhand (@ANINewsUP) September 17, 2021
Advertisement
ಪೇಪರ್ ಚೀಲದ ಮೇಲೆ ಶೇ.18ರಷ್ಟು ಜಿಎಸ್‍ಟಿ ವಿಧಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಮೇಲೆ ಜಿಎಸ್‍ಟಿಯನ್ನು ಶೇ.5ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಮೆಹಂದಿ ಪುಡಿ, ಎಲೆಗಳ ಮೇಲೆಯೂ ಶೇ.12ರಷ್ಟು ಜಿಎಸ್‍ಟಿ ವಿಧಿಸಲಾಗಿದೆ. ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‍ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದೆ. ಬಯೋ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 1,003 ಕೇಸ್- ಐದು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ