ನವದೆಹಲಿ: ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಭಾರತ ಮತ್ತೊಮ್ಮೆ ದಾಖಲೆ ಬರೆದಿದೆ. ಪ್ರಧಾನಿ ಮೋದಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಇಂದು ನಡೆದ ಬೃಹತ್ ಲಸಿಕಾ ಅಭಿಯಾನದ ಮೊದಲ 9 ಗಂಟೆಯಲ್ಲೇ 2 ಕೋಟಿಗೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ.
ದೇಶದಲ್ಲಿ ಕೆಲ ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ದಾಖಲೆಯ ಒಂದು ಕೋಟಿಗೂ ಅಧಿಕ ಲಸಿಕೆ ವಿತರಿಸುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ. ಇವತ್ತು ಒಂದೇ ದಿನ ಬರೋಬ್ಬರಿ 2ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, ಮುಂದಿನ ಅಕ್ಟೋಬರ್ ಮೊದಲ ವಾರದೊಳಗೆ 100 ಕೋಟಿ ಲಸಿಕೆ ದಾಟುವ ಸಾಧ್ಯತೆಗಳಿವೆ. ಈ ಹಿಂದೆ ಆಗಸ್ಟ್ 27 ಮತ್ತು 31 ರಂದು ಒಂದು ಕೋಟಿಗೂ ಅಧಿಕ ಲಸಿಕೆ ಹಾಕಲಾಗಿತ್ತು. ಆ ಬಳಿಕ ಸೆಪ್ಟೆಂಬರ್ 6 ಮತ್ತು ಇಂದು ಒಂದು ಕೋಟಿಗೂ ಅಧಿಕ ಲಸಿಕೆ ಹಾಕಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 1,003 ಕೇಸ್- ಐದು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ
ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲೇ ವ್ಯಾಕ್ಸಿನೇಷನ್ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಇವತ್ತು 23 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡಿದ್ದ ಒಟ್ಟಾರೆ ಪ್ರಮಾಣ 5 ಕೋಟಿ ದಾಟಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಪ್ರಧಾನಿ ಮೋದಿಗೆ ಜನ್ಮದಿನದ ಕಾಣಿಕೆ ನೀಡಬೇಕೆಂದು ದೇಶವಾಸಿಗಳಿಗೆ ಬಿಜೆಪಿ ನಾಯಕರು ಕರೆ ನೀಡಿದ್ದರು. ಲಸಿಕೆ ಹಾಕಿಸಿಕೊಂಡು, ಇತರರಿಗೆ ಸ್ಲಾಟ್ ಬುಕ್ ಮಾಡಿಕೊಟ್ಟು ವ್ಯಾಕ್ಸಿನ್ ಸೇವೆಯಲ್ಲಿ ಪಾಲ್ಗೊಳ್ಳಿ ಎಂದು ಕೇಂದ್ರ ಆರೋಗ್ಯ ಮಂತ್ರಿ ಮನಸುಖ್ ಮಾಂಡವೀಯ ಮನವಿ ಮಾಡಿದ್ದರು. ಇದಕ್ಕೆ ದೊಡ್ಡಮಟ್ಟದಲ್ಲಿ ಸ್ಪಂದನೆ ಸಿಕ್ಕಿದೆ. ಜನ ಪ್ರವಾಹೋಪಾದಿಯಲ್ಲಿ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ.
#LargestVaccineDrive #Unite2FightCorona pic.twitter.com/Uly8hVAZY6
— Ministry of Health (@MoHFW_INDIA) September 17, 2021
ಎಲ್ಲಿಯೂ ಯಾವುದೇ ರೀತಿಯ ತೊಂದರೆ ಅವಘಡಗಳು ಆಗದಂತೆ, ಕೋವಿಡ್ ನಿಯಮಗಳು ಬ್ರೇಕ್ ಆಗದ ರೀತಿಯಲ್ಲಿ ಲಸಿಕಾ ಅಭಿಯಾನವನ್ನು ಇಂದು ಯಶಸ್ವಿಯಾಗಿದೆ. ಇದನ್ನೂ ಓದಿ: 1 ಸಾಲಿನಲ್ಲಿ ಪ್ರಧಾನಿಗೆ ವಿಶ್ ಮಾಡಿದ ರಾಹುಲ್ ಗಾಂಧಿ