ನವದೆಹಲಿ: ಮುಂದಿನ 25 ವರ್ಷ ವರ್ಷಗಳ ದೂರದೃಷ್ಟಿಯನ್ನು ಈ ಬಜೆಟ್ ಹೊಂದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Advertisement
ಲೋಕಸಭೆಯಲ್ಲಿ ಬಜೆಟ್ ಭಾಷಣದ ವೇಳೆ ಮಾತನಾಡಿದ ಅವರು, ಭಾರತ ಈಗ 75 ವರ್ಷಗಳ ಸ್ವಾತಂತ್ರತ್ಯ ಸಂಭ್ರಮದಲ್ಲಿದೆ. ಈ ಅಮೃತ ಕಾಲದದಲ್ಲಿ ಮುಂದೆ 25 ವರ್ಷಗಳಲ್ಲಿ ಭಾರತ ಆರ್ಥಿಕತೆಯ ನೀಲನಕ್ಷೆಯನ್ನು ದೂರದೃಷ್ಟಿ ಈ ಬಜೆಟ್ನಲ್ಲಿದೆ ಎಂದು ತಿಳಿಸಿದರು.
Advertisement
Chemical-free natural farming will be promoted throughout the country with a focus on farmers’ land in 5 km wide corridors along the river Ganga, in the first stage: FM Nirmala Sitharaman#Budget2022 pic.twitter.com/aFQ3uTYJ5O
— ANI (@ANI) February 1, 2022
ನಾವು ಓಮಿಕ್ರಾನ್ ಅಲೆಯ ಮಧ್ಯೆ ಇದ್ದೇವೆ, ನಮ್ಮ ವ್ಯಾಕ್ಸಿನೇಷನ್ ಅಭಿಯಾನದ ವೇಗವು ಹೆಚ್ಚು ಸಹಾಯ ಮಾಡಿದೆ. ‘ಸಬ್ಕಾ ಪ್ರಯಾಸ್’, ನಾವು ಬಲವಾದ ಬೆಳವಣಿಗೆಯೊಂದಿಗೆ ಮುಂದುವರಿಯುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.
Advertisement
Advertisement
ಮುಂದಿನ 3 ವರ್ಷಗಳಲ್ಲಿ ಉತ್ತಮ ದಕ್ಷತೆಯೊಂದಿಗೆ 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ತರಲಾಗುವುದು. ಪ್ರಧಾನಮಂತ್ರಿ ಗತಿಶಕ್ತಿ ಅಡಿಯಲ್ಲಿ 100 ಕಾರ್ಗೋ ಟರ್ಮಿನಲ್ಗಳನ್ನು ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಮೆಟ್ರೋ ವ್ಯವಸ್ಥೆಗಳನ್ನು ನಿರ್ಮಿಸಲು ನವೀನ ಮಾರ್ಗಗಳ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.