ನವದೆಹಲಿ: ವೇತನ ಪಡೆಯುವ ತೆರಿಗೆದಾರರಿಗೆ 12 ಲಕ್ಷ ರೂ.ವರೆಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಈಗ ತೆರಿಗೆದಾರರು ಹೊಂದಿರುವ ಎರಡನೇ ಮನೆಗೂ (Second Self-Occupied House) ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಒಂದು ಮನೆಗೆ ಮಾತ್ರ ತೆರಿಗೆ (Tax) ವಿನಾಯಿತಿ ಇತ್ತು. ಎರಡನೇ ಮನೆ ಹೊಂದಿದ್ದರೆ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಎರಡನೇ ಮನೆಗೂ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ ಸುದ್ದಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್ ವಿಸ್ತರಣೆ
Advertisement
Advertisement
ಈ ಸೌಲಭ್ಯದಿಂದ ಎರಡು ಮನೆ ಹೊಂದಿರುವವರು ಒಂದನ್ನು ವಾಸಕ್ಕೆ ಮತ್ತೊಂದು ಆಗಾಗ್ಗೆ ಬಂದು ಹೋಗುವ ಪ್ರವಾಸದ ಮನೆಯಾಗಿ ಹೊಂದಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಬಂಪರ್ – 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ
Advertisement
ಹೆಚ್ಚುವರಿಯಾಗಿ ಬಾಡಿಗೆಯ ಮೇಲಿನ ವಾರ್ಷಿಕ ಟಿಡಿಎಸ್ ಮೊತ್ತವನ್ನು 2.40 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಏರಿಸಲಾಗುತ್ತದೆ.
Advertisement