ನವದೆಹಲಿ: ಕೇಂದ್ರ ಬಜೆಟ್ (Union Budget 2023-24) ಸಿದ್ಧತೆ ಅಂತಿಮ ಹಂತಕ್ಕೆ ಬಂದಿದ್ದು, ದೆಹಲಿಯ (New Delhi) ನಾರ್ಥ್ ಬ್ಲಾಕ್‍ನಲ್ಲಿರುವ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ಸಿಬ್ಬಂದಿಗೆ ಹಲ್ವಾ ಹಂಚಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಂಭ್ರಮಿಸಿದ್ದಾರೆ.
ಫೆ.1 ರಂದು ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಹಲ್ವಾ ಹಂಚುವ ಮೂಲಕ ಅಂತಿಮ ಹಂತದ ಸಿದ್ಧತೆಗೆ ಚಾಲನೆ ನೀಡಲಾಯಿತು. ಈ ವೇಳೆ ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಮತ್ತು ಭಾಗವತ್ ಕಿಸನ್‍ರಾವ್ ಕರದ್ ಉಪಸ್ಥಿತರಿದ್ದರು.
Advertisement
Advertisement
ಬಜೆಟ್‍ನ ಸಿದ್ಧತೆಯನ್ನು ಗುಪ್ತವಾಗಿರಿಸುವ ಹಿನ್ನೆಲೆಯಲ್ಲಿ ಬಜೆಟ್‍ನಲ್ಲಿ ಸಿದ್ಧಪಡಿಸಲು ಭಾಗಿಯಾಗಿರುವ ಹಣಕಾಸು ಅಧಿಕಾರಿಗಳು ಸುಮಾರು 10 ದಿನಗಳ ಕಾಲ ಉತ್ತರ ಬ್ಲಾಕ್‍ನ ನೆಲಮಾಳಿಗೆಯಲ್ಲೇ ಇರಬೇಕು. ಆ ಸಿಬ್ಬಂದಿ ಎಲ್ಲರೂ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾರ್ಷಿಕ ಬಜೆಟ್ ಮಂಡಿಸುವವರೆಗೂ ಅಲ್ಲಿಯೇ ಇರುತ್ತಾರೆ. ಬಜೆಟ್‍ನಲ್ಲಿರುವ ವಿಷಯಗಳು ಯಾವುದೇ ರೀತಿಯಲ್ಲೂ ಸೋರಿಕೆಯಾಗದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಮೇಲೆ ಸಿಡಿಮಿಡಿಗೊಂಡ ಸಿಎಂ
Advertisement
The final stage of the Budget preparation process for Union Budget 2023-24 commenced with the Halwa ceremony in the presence of Union Finance & Corporate Affairs Minister Smt. @nsitharaman, here today.
Read more ➡️ https://t.co/jFz9sLN5Iv
(1/5) pic.twitter.com/3Rd3n8bCET
— Ministry of Finance (@FinMinIndia) January 26, 2023
Advertisement
ಹಲ್ವಾ ಸಮಾರಂಭದ ನಂತರ, ಬಜೆಟ್ ದಾಖಲೆಗಳನ್ನು ಮುದ್ರಿಸಲಾಗುತ್ತದೆ. ಆದರೆ 2021ರಿಂದ ಬಜೆಟ್ ಕಾಗದ ರಹಿತವಾಗಿರುವುದರಿಂದ, ಬಜೆಟ್‍ನ್ನು ಮುದ್ರಣ ಮಾಡಲಾಗುವುದಿಲ್ಲ. ಈ ವರ್ಷವೂ, ಹಿಂದಿನ ಎರಡು ಬಜೆಟ್‍ಗಳಂತೆ, 2023-24ರ ಕೇಂದ್ರ ಬಜೆಟ್ ಅನ್ನು ಸಹ ಕಾಗದರಹಿತ ರೂಪದಲ್ಲಿ ವಿತರಿಸಲಾಗುತ್ತದೆ. ಇದನ್ನೂ ಓದಿ: ಜಪಾನ್-ದಕ್ಷಿಣ ಕೊರಿಯಾ ಜಲಮಾರ್ಗದಲ್ಲಿ ಮುಳುಗಿದ ಹಡಗು; 8 ಮಂದಿ ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k