ನವದೆಹಲಿ: ಸಂಸತ್ (Parliament) ಹಾಲ್‌ನಲ್ಲಿ ಮೊದಲ ಹಂತದ ಬಜೆಟ್ ಅಧಿವೇಶನ (Union Budget 2023) ಇಂದಿನಿಂದ (ಮಂಗಳವಾರ) ಆರಂಭವಾಗಿದ್ದು, ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಬಜೆಟ್ ಮಂಡಿಸಲಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಮಂಡಿಸಲಿರುವ ಕೊನೆಯ ಹಾಗೂ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಒಂದೆಡೆ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ. ಮತ್ತೊಂದೆಡೆ ದಿನೇ ದಿನೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಗಳಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಹೆಚ್ಚಿದ ಬಡ್ಡಿದರದಿಂದ ತಿಂಗಳ ಇಎಂಐಗಳು ಭಾರವಾಗಿ ಪರಿಣಮಿಸಿದೆ. ಜೊತೆಗೆ ಉದ್ಯೋಗ ಅಭದ್ರತೆಯ ಚಿಂತೆ ಕೂಡ ಶುರುವಾಗಿದೆ. ಇದರ ಮಧ್ಯೆ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆಗಳು ಸರಣಿಯಾಗಿ ನಡೆಯಲಿವೆ. ಈ ಹೊತ್ತಲ್ಲಿಯೇ ಮತ್ತೊಮ್ಮೆ ಬಜೆಟ್ ಸಮಯ ಬಂದಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಈ ಬಜೆಟ್ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಿದೆ. ಇದನ್ನೂ ಓದಿ: ನನ್ನ ಸರ್ಕಾರ ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ತಿದೆ: ಮುರ್ಮು
Advertisement
Advertisement
ಬಜೆಟ್ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ಈ ಸಂದರ್ಭದಲ್ಲಿ ಕೇಂದ್ರದ ಬಜೆಟ್‌ಗಾಗಿ ಬರೀ ಭಾರತವಲ್ಲ ಇಡೀ ವಿಶ್ವವೇ ಎದಿರು ನೋಡ್ತಿದೆ ಎಂದಿದ್ದಾರೆ.
Advertisement
ಕೇಂದ್ರ ಬಜೆಟ್; ತೆರಿಗೆ ಪಾವತಿದಾರರ ಬೇಡಿಕೆಗಳೇನು?
ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು, ಶೇ.30ರಷ್ಟು ತೆರಿಗೆ ಸ್ಲಾಬ್ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕು, ಸೆಕ್ಷನ್ 80-ಸಿ ಅಡಿ ನೀಡುತ್ತಿರುವ ವಿನಾಯ್ತಿ ಮಿತಿ ಹೆಚ್ಚಿಸಬೇಕು, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ 2 ಲಕ್ಷಕ್ಕೆ ಹೆಚ್ಚಳ ಮಾಡಬೇಕು, ಜೀವವಿಮೆ, ಆರೋಗ್ಯ ವಿಮೆ ಪ್ರೀಮಿಯಂಗಳಿಗೆ ತೆರಿಗೆ ವಿನಾಯ್ತಿ, ಗೃಹಸಾಲದ ಬಡ್ಡಿ ಏರಿಕೆಯಾಗುತ್ತಿದೆ.. ಇದನ್ನು ಇಳಿಕೆ ಮಾಡಬೇಕು, ಐಟಿ ರೂಲ್ 24ರ ಅಡಿ ಲಭ್ಯವಿರುವ ವಿನಾಯ್ತಿ ಮಿತಿಯನ್ನು 4 ಲಕ್ಷಕ್ಕೆ ಹೆಚ್ಚಿಸಬೇಕು, ಠೇವಣಿ, ಬಾಂಡ್, ಪಿಪಿಎಫ್ ಹೂಡಿಕೆಗಳ ಮೇಲಿನ ವಿನಾಯ್ತಿ ಮಿತಿ ಹೆಚ್ಚಿಸಬೇಕು. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ
Advertisement
ಜನಸಾಮಾನ್ಯರ ಬೇಡಿಕೆಗಳೇನು?
ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು (ವಿಶೇಷವಾಗಿ ಬೇಳೆಕಾಳು, ಅಕ್ಕಿ, ಗೋಧಿ, ಹಾಲು), ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಇಳಿಕೆ ಮಾಡಬೇಕು, ಬೆಲೆ ಏರಿಕೆ ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು, ನಿರುದ್ಯೋಗ ಹೆಚ್ಚುತ್ತಿದೆ; ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಬೇಕು, ಮಧ್ಯಮ ವರ್ಗದ ಎಲ್ಲಾ ವೃತ್ತಿಯವರಿಗೆ ಒಳ್ಳೆಯದು ಮಾಡಬೇಕು, ಶಿಕ್ಷಣ ವೆಚ್ಚದ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡಬೇಕು.
ಕೃಷಿಕರ ಬೇಡಿಕೆಗಳೇನು?
ರಸಗೊಬ್ಬರ, ರಾಸಾಯನಿಕಗಳ ಮೇಲೆ ಅಧಿಕ ಸಹಾಯಧನ, ಪಶುಸಂಗೋಪನಾ ವಲಯಕ್ಕೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ, ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಹೆಚ್ಚಿಸಬೇಕು, ಕೃಷಿ ಸಮ್ಮಾನ್ ಯೋಜನೆಯಡಿ ಸಹಾಯಧನ ಹೆಚ್ಚಿಸಬೇಕು.
ರಕ್ಷಣಾ ಇಲಾಖೆ ನಿರೀಕ್ಷೆಗಳೇನು?
ಐಎನ್‌ಎಸ್ ವಿಕ್ರಾಂತ್‌ಗೆ ಮರೇನ್ ರಫೇಲ್ ವಿಮಾನ ಖರೀದಿ, ಪ್ರಾಜೆಕ್ಟ್ 75ಐ ಅಡಿ 6 ಜಲಂತಾರ್ಗಾಮಿ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ, ಮಲ್ಟಿ ರೋಲ್ ಫೈಟರ್ ಏರ್‌ಕ್ರಾಫ್ಟ್‌ಗಳ ಖರೀದಿ, ಅನುದಾನ ಸಂಪೂರ್ಣ ಬಳಕೆಗಾಗಿ ನಾನ್ ಲ್ಯಾಪ್ಸೆಬಲ್ ಫಂಡ್, ಒನ್ ರ‍್ಯಾಂಕ್, ಒನ್ ಪೆನ್ಶನ್‌ಗಾಗಿ ಹೆಚ್ಚುವರಿ ಅನುದಾನ. ಇದನ್ನೂ ಓದಿ: Union Budget 2023: ಮಂಗಳವಾರದಿಂದ ಬಜೆಟ್ ಅಧಿವೇಶನ – ಫೆ. 1ಕ್ಕೆ ಬಜೆಟ್ ಮಂಡನೆ
ಕೇಂದ್ರದ ಮುಂದಿರುವ ಸವಾಲುಗಳೇನು?
ಜನಪರ ಕಾರ್ಯಸೂಚಿ ನಡುವೆ ಆರ್ಥಿಕ ಸಮತೋಲನ, ಶೇ.6.4ರಷ್ಟಿರುವ ವಿತ್ತೀಯ ಕೊರತೆ ನಿಯಂತ್ರಿಸುವುದು, ಹಣದುಬ್ಬರ ನಿಯಂತ್ರಣ, ಜನರ ಕೊಳ್ಳುವ ಶಕ್ತಿಗೆ ಇಂಬು, ಉದ್ಯೋಗ ಸೃಷ್ಟಿ, ರಫ್ತು ಪ್ರಮಾಣ ಹೆಚ್ಚಳ ಮಾಡುವುದು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k