ನವದೆಹಲಿ: ಮಂಗಳವಾರದಿಂದ ಬಜೆಟ್ ಅಧಿವೇಶನ (Budget Session) ಪ್ರಾರಂಭವಾಗುತ್ತಿದ್ದು, ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತ ಐದನೇ ಬಾರಿ ಬಜೆಟ್ (Budget) ಮಂಡಿಸಲಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಮಂಡಿಸಲಿರುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಸತ್ ಭವನದಲ್ಲಿಂದು ಸರ್ವಪಕ್ಷ ಸಭೆ ಕರೆದಿತ್ತು. ಲೋಕಸಭೆ ಉಪ ನಾಯಕ ರಾಜನಾಥ್ ಸಿಂಗ್ (Rajnath Singh), ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ನೇತೃತ್ವದಲ್ಲಿ ನಡೆದ ಸಭೆಗೆ, ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಮಾರೋಪ ಸಮಾರಂಭದ ಕಾರಣ ಕಾಂಗ್ರೆಸ್ ನಾಯಕರು ಗೈರಾಗಿದ್ದರು. ಉಳಿದಂತೆ, ಡಿಎಂಕೆ, ಟಿಎಂಸಿ, ಬಿಆರ್‌ಎಸ್, ವೈಎಸ್‍ಆರ್ ಕಾಂಗ್ರೆಸ್, ಜೆಡಿಯು, ಶಿವಸೇನಾ ಸೇರಿ 27 ಪಕ್ಷಗಳ 37 ನಾಯಕರು ಪಾಲ್ಗೊಂಡಿದ್ರು. ಸುಗಮ ಕಲಾಪಕ್ಕೆ ಅವಕಾಶ ನೀಡ್ಬೇಕೆಂದು ವಿಪಕ್ಷಗಳಿಗೆ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಕೋರಿದ್ರು. ಇದನ್ನೂ ಓದಿ: ಕಾಶ್ಮೀರದ ಬೀದಿಗಳಲ್ಲಿ ನಡೆಯಲು ಅಮಿತ್ ಶಾ ಸಹಿತ ಬಿಜೆಪಿ ನಾಯಕರಿಗೆ ಅಸಾಧ್ಯ – ಅವರಿಗೆ ಭಯವಿದೆ: ರಾಹುಲ್ ಗಾಂಧಿ
ಈ ನಡುವೆ ಹಿಂಡನ್‍ಬರ್ಗ್ ವರದಿಯ ಚರ್ಚೆಗೆ ಅವಕಾಶ ನೀಡ್ಬೇಕೆಂದು ಎಎಪಿ ಆಗ್ರಹಿಸಿತು. ಜಾತಿ ಗಣತಿಗೆ ವೈಎಸ್‍ಆರ್ ಕಾಂಗ್ರೆಸ್ ಒತ್ತಾಯಿಸಿತು. ಈ ಮಧ್ಯೆ, ನಾಳೆ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಮಾಡುವ ಭಾಷಣವನ್ನು ಬಹಿಷ್ಕರಿಸಲು ಬಿಆರ್‌ಎಸ್ ನಿರ್ಧರಿಸಿದೆ. ಮಂಗಳವಾರ ಸಂಜೆ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಒಟ್ಟು ಎರಡು ಹಂತದಲ್ಲಿ ಈ ಅಧಿವೇಶನ ನಡೆಯಲಿದೆ. ನಾಳೆಯಿಂದ ಫೆಬ್ರವರಿ 13 ರವರೆಗೆ ಮತ್ತು ಕೊನೆಯ ಹಂತ ಮಾರ್ಚ್ 13 ರಿಂದ ಏಪ್ರಿಲ್ 6ರವರೆಗೆ ಅಧಿವೇಶನ ನಡೆಯಲಿದೆ. ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುವುದಕ್ಕಿಂತ ಸಾಯುತ್ತೇನೆ: ನಿತೀಶ್ ಕುಮಾರ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k