ೇನವದೆಹಲಿ: ನಿಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ದರೂ, ಒಂದು ವೇಳೆ ಬ್ಯಾಂಕ್ ಮುಚ್ಚಿದ್ರೆ ನಿಮಗೆ 5 ಲಕ್ಷ ರೂ. ಮಾತ್ರ ಸಿಗಲಿದೆ. 2020-21ನೇ ಸಾಲಿನ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಬ್ಯಾಂಕ್ ಗ್ಯಾರಂಟಿಯ ಮೊತ್ತವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಯಾವುದೋ ಒಂದು ಬ್ಯಾಂಕ್ ಕಾರಣಾಂತರಗಳಿಂದ ಅಥವಾ ಹಗರಣದಲ್ಲಿ ಸಿಲುಕಿ ಬಂದ್ ಆಗುವ ಸಾಧ್ಯತೆಗಳಿರುತ್ತವೆ. ಆ ಬ್ಯಾಂಕಿನಲ್ಲಿ ಎಷ್ಟೇ ಹಣ ಠೇವಣಿ ಮಾಡಿದ್ದರೂ, ಗ್ರಾಹಕನಿಗೆ ಕೇವಲ 5 ಲಕ್ಷ ರೂ. ಸಿಗಲಿದೆ. ಇಲ್ಲಿಯವರೆಗೆ ಈ ಗ್ಯಾರೆಂಟಿ 1 ಲಕ್ಷಕ್ಕೆ ಮಾತ್ರ ಸೀಮಿತವಾಗಿತ್ತು. ಈ ರೀತಿಯ ಬ್ಯಾಂಕ್ ಗ್ರಾಹಕರು ಭೀಮಾ ಸುರಕ್ಷಾ ಯೋಜನೆಗೆ ಒಳಪಡಲಿದ್ದು, 5 ಲಕ್ಷ ರೂ.ಯನ್ನು ಪಡೆಯಬಹುದಾಗಿದೆ. ಇದನ್ನೂ ಓದಿ: ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನ- ಸೀತಾರಾಮನ್ ಹೊತ್ತಿಗೆಯಲ್ಲಿ ರೈತರಿಗೆ ಸಿಕ್ಕಿದ್ದೆಷ್ಟು?
Advertisement
Advertisement
ನಿರ್ಮಲಾ ಸೀತಾರಾಮನ್ ಸರ್ಕಾರಿ ಬ್ಯಾಂಕುಗಳಿಗಾಗಿ 3 ಲಕ್ಷ 50 ಸಾವಿರ ಕೋಟಿ ರೂ.ಯನ್ನು ಹಣ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಐಡಿಬಿಐ ಬ್ಯಾಂಕ್‍ನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲಾಗುವುದು. ಐಡಿಬಿಐನಲ್ಲಿರೊ ಸರ್ಕಾರದ ಪಾಲುದಾರಿಕೆಯನ್ನ ಮಾರಾಟ ಮಾಡಲಾಗುವುದು ಎಂದು ಹೇಳುತ್ತಿದ್ದಂತೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಧ್ವನಿ ಎತ್ತಿ ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿಯೇ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಕೇಂದ್ರ ಬಜೆಟ್ 2020- ಯಾವುದು ಏರಿಕೆ, ಯಾವುದು ಇಳಿಕೆ?