ಹಾಸನ: ಹಾಡಹಗಲೇ ಅಪರಿಚಿತರು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟೆನ ಹಾಸನ ನಗರದ ಹೊರವಲಯ ದಾಸರ ಕೊಪ್ಪಲು ಬಳಿ ನಡೆದಿದೆ.
ಸಂತೋಷ್ ಅಲಿಯಾಸ್ ಡುಮ್ಮ ಸಂತೋಷ್(35) ಕೊಲೆಯಾದ ವ್ಯಕ್ತಿ. ಇಲ್ಲಿನ ಶಾಲೆ ರಸ್ತೆಯಲ್ಲಿರುವ ಸಮುದಾಯ ಭವನ ಬಳಿ ಅಪರಿಚಿತರು ಬಂದು ಸಂತೋಷರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಚಾಕು ದೊರೆತಿದ್ದು, ಶ್ವಾನ ದಳದಿಂದ ಕೂಡ ಪರಿಶೀಲನೆ ನಡೆಸಲಾಗಿದೆ. ಆದರೆ ಇನ್ನು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.