ಮಂಗಳೂರು: ಇಲ್ಲಿನ ಸುರತ್ಕಲ್ ಟೋಲ್‍ಗೇಟ್ (Surathkal Tollgate) ವಿವಾದ ಸದ್ಯದ ಮಟ್ಟಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಟೋಲ್‍ಗೇಟ್ ಕಿತ್ತೆಸೆಯಲು ಯತ್ನಿಸಿದ ಹಿನ್ನೆಲೆಯಲ್ಲಿ ಹೋರಾಟಗಾರರ ಮೇಲೆ ಎಫ್‍ಐಆರ್ (FIR) ದಾಖಲಾಗಿದೆ. ಹೀಗಾಗಿ ಟೋಲ್ ಸಂಗ್ರಹ ನಿಲ್ಲುವವರೆಗೂ ರಾತ್ರಿ- ಹಗಲು ಅನಿರ್ದಿಷ್ಟ ಧರಣಿಗೆ ನಿರ್ಧರಿಸಿದ್ದಾರೆ.
Advertisement
ಅ.18 ರಂದು ಮಂಗಳೂರಿನ ಸುರತ್ಕಲ್ ಟೋಲ್‍ಗೇಟ್ ಬಳಿ ಭಾರೀ ಹೈಡ್ರಾಮಾವೇ ನಡೆದಿತ್ತು. ಸುರತ್ಕಲ್ ಟೋಲ್‍ಗೇಟ್ ಅಕ್ರಮ ಎಂದು ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಹೋರಾಟ ಉಗ್ರ ಸ್ವರೂಪ ಪಡೆದಿತ್ತು. ಪೊಲೀಸರು ಹಾಕಿದ್ದ ತಡೆಬೇಲಿ ಮುರಿದು ಟೋಲ್‍ಗೇಟ್‍ನತ್ತ ನುಗ್ಗಿದ್ದ ಹೋರಾಟಗಾರರು, ಹೈಡ್ರಾಮಾ ನಡೆಸಿದ್ದು ಬಳಿಕ ಪೊಲೀಸರು ನೂರಾರು ಹೋರಾಟಗಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ರು. ಆದರೆ ಇದೀಗ ಟೋಲ್‍ಗೇಟ್‍ನ ಗುತ್ತಿಗೆದಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನೀಡಿದ ದೂರಿನಂತೆ ಹೋರಾಟಗಾರರ ಮೇಲೆ ಎರಡು ಎಫ್‍ಐಆರ್ ದಾಖಲಾಗಿದೆ.
Advertisement
Advertisement
ಟೋಲ್‍ಗೇಟನ್ನು ನ.7ರೊಳಗಾಗಿ ಸ್ಥಗಿತಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಆದರೆ ಇಂತಹ ದಿನಾಂಕಗಳು ಕಳೆದ ಆರು ವರ್ಷದಿಂದ ಆಗಿರೋದ್ರಿಂದ ಇದರ ಬಗ್ಗೆ ನಂಬಿಕೆ ಇಲ್ಲ. ಹೀಗಾಗಿ ಹೋರಾಟ ಸಮಿತಿ ಸಭೆ ಸೇರಿ ಮುಂದಿನ ಹೋರಾಟದ ಭಾಗವಾಗಿ ಅಕ್ಟೋಬರ್ 28 ರಿಂದ ಟೋಲ್‍ಗೇಟ್ ಮುಂಭಾಗದಲ್ಲಿ ರಾತ್ರಿ ಹಗಲು ಅನಿರ್ದಿಷ್ಟ ಧರಣಿ ನಡೆಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ, ಗಲಾಟೆಗೆ ಕರಪತ್ರ ಹಂಚಿಕೆ – PFI ಸಂಘಟನೆಯ ಕುತಂತ್ರ ಮತ್ತಷ್ಟು ಬಯಲು
Advertisement
ಟೋಲ್ ಗೇಟ್ ವಿಚಾರದಲ್ಲಿ ಈ ಬಾರಿ ಮಾಡು ಇಲ್ಲವೇ ಮಡಿ ಅನ್ನೋದಕ್ಕೆ ಹೋರಾಟಗಾರರ ಸಮಿತಿ ನಿರ್ಧರಿಸಿದೆ.