– ಟಾಯ್ಲೆಟ್ ಪೈಪ್ನೊಳಗೆ ಮೊಬೈಲ್ ಇಟ್ಟಿದ್ದ ಖತರ್ನಾಕ್ಗಳು
– ಕರ್ತವ್ಯ ಲೋಪದಡಿ ಮೂವರು ವಾರ್ಡರ್ ಸಸ್ಪೆಂಡ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ (Parappana Agrahara Jail) ನಟೋರಿಯಸ್ಗಳ ಬ್ಯಾರಕ್ ಚೇಂಜ್ ಮಾಡುವಂತೆ ಅಲೋಕ್ ಕುಮಾರ್ ಸೂಚಿಸಿದ್ದೇ ತಡ, ಮಲಮೂತ್ರ ಹೋಗುವ ಗುಂಡಿಯಲ್ಲಿದ್ದ ಮೊಬೈಲ್ ಗಳನ್ನ ಹೊರತೆಗೆದು, ಅಲೋಕ್ ಕುಮಾರ್ ಮೊಬೈಲ್ ಕೊಟ್ರು, ಐಪಿಎಲ್ ಮ್ಯಾಚ್ ಇದೆ ಕಪ್ ನಮ್ದೆ ಅಂತಾ ವೀಡಿಯೊ ಮಾಡಿ ವೈರಲ್ ಮಾಡಿದ್ರು. ಇದೀಗ ಆ ಕೈದಿಗಳ (Prisoners) ಬಣ್ಣ ಬಯಲಾಗಿದೆ.
ಹೌದು. ಈ ವಿಡಿಯೋ ಮಾಡಿದ್ದು ಬೇರೆಲ್ಲೂ ಅಲ್ಲ.. ಪರಪ್ಪನ ಅಗ್ರಹಾರ ಜೈಲಲ್ಲಿ.. ವಿಚಾರಣಾಧೀನ ಕೈದಿಗಳು ವಿಡಿಯೋ ಹರಿಬಿಟ್ಟು ತಗ್ಲಾಕೊಂಡಿದ್ದಾರೆ. ಅದೂ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ (Alok Kumar) ಹೆಸರಿಗೆ ಕಳಂಕ ತರಲು ಹೋಗಿ ಪೀಕಲಾಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ – ಕೊಲೆ ಮಾಡಿ ಸುಟ್ಟು ಬಿಸಾಕಿರುವ ಶಂಕೆ

ನಾಳೆ ಐಪಿಎಲ್ ಮ್ಯಾಚ್ ಇದೆ.. ಜೈಲಲ್ಲಿ ಟಿವಿ, ಮೊಬೈಲ್ ಇದೆ.. ನೆಟ್ಫ್ಲಿಕ್ಸ್ ಕೂಡ ಇದೆ.. ಇನ್ನು ಈ ಮೊಬೈಲ್ನ ಸಪ್ಲೈ ಮಾಡಿದ್ದೇ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಎಂದು ಕೈದಿಗಳು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ನಡೆದುಕೊಂಡು ಹೋಗುತ್ತಿದ್ದವರಿಗೆ ಥಾರ್ ಡಿಕ್ಕಿ – ಅಜ್ಜ, ಇಬ್ಬರು ಮೊಮ್ಮಕ್ಕಳು ದುರ್ಮರಣ
ಇನ್ನೂ, ಜೈಲು ಡಿಜಿಯಾಗಿ ಅಲೋಕ್ ಕುಮಾರ್ ಬಂದ ಬಳಿಕ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿದ್ರು. ಇತ್ತೀಚೆಗೆ ನಟೋರಿಯಸ್ ಕೈದಿಗಳ ಬ್ಯಾರಕ್ ಶಿಫ್ಟ್ ಮಾಡುವಂತೆ ಅಲೋಕ್ ಕುಮಾರ್ ಸೂಚಿಸಿದ್ದಾರೆ. ಹೇಗಾದ್ರು ಮಾಡಿ ಬ್ಯಾರಕ್ ಚೇಂಜ್ ಮಾಡದಂತೆ ತಪ್ಪಿಸಿಕೊಳ್ಳಬೇಕು ಅನ್ನೊ ನಿಟ್ಟಿನಲ್ಲಿ ಬ್ಯಾರಕ್ ನಂಬರ್ 9ರ ರೂಮ್ 6 ರಲ್ಲಿನ ಖೈದಿಗಳು ವೀಡಿಯೊ ಮಾಡಿ ವೈರಲ್ ಮಾಡಿರೋದು ತನಿಖೆಯಲ್ಲಿ ಗೊತ್ತಾಗಿದೆ.
ಟಾಯ್ಲೆಟ್ ಪೈಪ್ನೊಳಗಿತ್ತು ಮೊಬೈಲ್
ಕೈದಿಗಳು ಜೈಲೊಳಗೆ ಎಲ್ಲಿ ಮೊಬೈಲ್ ಬಚ್ಚಿಟ್ಟಿದ್ರು ಅಂತಾ ಗೊತ್ತಾದ್ರೆ ಅಸಹ್ಯ ಹುಟ್ಟಿಸುತ್ತೆ. ಮಲ ಮೂತ್ರ ಹೋಗುವ ಪೈಪೊಳಗೆ ಮೊಬೈಲ್ಗೆ ನಾಲ್ಕೈದು ಕವರ್ ಸುತ್ತಿ ಮುಚ್ಚಿಟ್ಟು ಬೇಕಾದಾಗ ಮೊಬೈಲ್ ಬಳಕೆ ಮಾಡ್ತಿದ್ದು ಗೊತ್ತಾಗಿದೆ. ವಿಡಿಯೋ ಮಾಡುವುದಕ್ಕೆ ಮೊಬೈಲ್ ಹೇಗೆ ಸಿಕ್ತು.. ಮೊಬೈಲ್ ಎಲ್ಲಿಟ್ಟಿದ್ದರು ಎಂಬುದರ ಬಗ್ಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೈದಿಗಳ ಅಸಲಿ ಮುಖವಾಡವನ್ನು ಕಳಚಿದ್ದಾರೆ. ಟಾಯ್ಲೆಟ್ ಚೇಂಬರ್ನಲ್ಲಿ ಮೊಬೈಲ್ ಸುತ್ತಿಟ್ಟಿದ್ದನ್ನು ಖಾಕಿ ಮುಂದೆ ಸತ್ಯ ಕಕ್ಕಿದ್ದಾರೆ.

ಇನ್ನೂ ಅಲೋಕ್ ಕುಮಾರ್ ಹೆಸರೇಳಿ ವಿಡಿಯೋ ಮಾಡಿದ್ದ ವಿಚಾರಣಾಧೀನ ಕೈದಿಗಳಾದ ಅಭಿ@ ಅಭಿಶೇಕ್ ಮತ್ತು ದರ್ಶನ್ ಹಾಗೂ ಮತ್ತಿಬ್ಬರು ಕೈದಿಗಳನ್ನ ಪೊಲೀಸರು ಲಾಕ್ ಮಾಡಿದ್ದಾರೆ. 2 ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿರೋ ದರ್ಶನ್ ಮತ್ತು ಅಭಿ.. ಎಂಡ್ರೋಸ್ ಎಂಬಾತನಿಗೆ ಪ್ರಚೋದನೆ ಕೊಟ್ಟು ವಿಡಿಯೋ ಮಾಡಿಸಿ ಹರಿಬಿಟ್ಟಿದ್ದಾರೆ. ಇದೀಗ ಸುಳ್ಳು ಹೇಳಿ ವೀಡಿಯೊ ಹರಿಬಿಟ್ಟಿರೋದು ಹಾಗೂ ಅಕ್ರಮವಾಗಿ ಮೊಬೈಲ್ ಬಳಕೆ ಅಡಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಸದ್ಯ ಮೂವರನ್ನ ಕ್ವಾರಂಟೈನ್ ಸೆಲ್ಗೆ ಶಿಪ್ಟ್ ಮಾಡಲಾಗಿದೆ. ಅಲ್ಲದೇ, ಅಲೋಕ್ ಕುಮಾರ್ ಹೆಸ್ರು ಬೇಕಂತಲೇ ಹೇಳಿದ್ದಾಗಿ ಆರೋಪಿಗಳು ಸತ್ಯ ಕಕ್ಕಿದ್ದಾರೆ.
ಕರ್ತವ್ಯ ಲೋಪದಡಿ ಮೂವರು ವಾರ್ಡರ್ ಸಸ್ಪೆಂಡ್..!
ಪ್ರಕರಣ ಸಂಬಂಧ ಕೂಡಲೇ ಎಚ್ಚೆತ್ತ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಮೂವರು ವಾರ್ಡರ್ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ ಕೊಟ್ಟಿದ್ಯಾರು..? ಕರ್ತವ್ಯ ಲೋಪದಡಿ ಮೂವರನ್ನು ಸಸ್ಪೆಂಡ್ ಮಾಡಿದ್ದಾರೆ.

