– ಸಹ ಕೈದಿಗಳ ಕಿರುಕುಳದಿಂದ ಸಾವು ಆರೋಪ
ಬೀದರ್: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಸಾವನ್ನಪ್ಪಿರುವ ಘಟನೆ ಬೀದರ್ (Bidar) ಜಿಲ್ಲೆಯ ಹುಮನಾಬಾದ್ ಕಾರಾಗೃಹದಲ್ಲಿ (Humnabad Jail) ನಡೆದಿದೆ.
ಬಸವಕಲ್ಯಾಣ (Basavakalyana) ತಾಲೂಕಿನ ಗೌರ್ ಗ್ರಾಮದ ಖಂಡಪ್ಪ ಮೇತ್ರೆ (46) ಮೃತ ಕೈದಿ. ಜೈಲು ಸಿಬ್ಬಂದಿ ನಿರ್ಲಕ್ಷ್ಯ, ಸಹ ಕೈದಿಗಳ ಕಿರುಕುಳದಿಂದ ಖಂಡಪ್ಪ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಖಂಡಪ್ಪ 2025ರ ಏಪ್ರಿಲ್ 14ರಂದು ಸ್ವಂತ ತಾತಿ ಸುಂದರಾಬಾಯಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ವಿಚಾರಣೆ ಎದುರಿಸುತ್ತಿದ್ದ. ಹೆತ್ತತಾಯಿಯನ್ನೇ ಕೊಲೆ ಮಾಡಿದ್ದಾನೆ ಎಂದು ಸಹೋದರಿಯರು ಆತನ ವಿರುದ್ಧ ಹುಲಸೂರು ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ವಿಚಾರಣೆ ಹಿನ್ನೆಲೆ ಎರಡೂವರೆ ತಿಂಗಳ ಹಿಂದೆ ಹುಮನಾಬಾದ್ ಜೈಲು ಸೇರಿದ್ದ. ಇದನ್ನೂ ಓದಿ: ಬೆಳಗಾವಿ ಮೃಗಾಲಯದಲ್ಲಿ ಮತ್ತೊಂದು ಕೃಷ್ಣ ಮೃಗ ಸಾವು – ಸಾವಿನ ಸಂಖ್ಯೆ 30ಕ್ಕೆ ಏರಿಕೆ!
ಸಹಕೈದಿಗಳ ಕಿರುಕುಳದಿಂದ ಬೇಸತ್ತು ಭಾನುವಾರ ಸಂಜೆ ಮರ ಏರಿ, ಬಿಲ್ಡಿಂಗ್‌ನಿಂದ ಜಿಗಿದು ಮೃತಪಟ್ಟಿದ್ದಾನೆ. ಸಹಕೈದಿಗಳ ಕಿರುಕುಳ ಕುರಿತು ಜೈಲರ್ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಸಾವನ್ನಪ್ಪಿದ್ದಾನೆ ಎಂದು ಎಂದು ಆರೋಪಿಸಲಾಗಿದೆ. ಜೈಲು ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಮೃತನ ಮಕ್ಕಳ ಅಳಲು ತೋಡಿಕೊಂಡಿದ್ದಾರೆ. ಸಹಕೈದಿಗಳು ಕಿರುಕುಳ ಕೊಡಲು ಕಾರಣವೇನು? ಅವರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು. ಜೊತೆಗೆ ನಿರ್ಲಕ್ಷ್ಯ ವಹಿಸಿರುವ ಜೈಲು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ವಿಚಾರಣಾಧೀನ ಕೈದಿ ಸಾವು ಹಿನ್ನೆಲೆ ಜೈಲು ಸಿಬ್ಬಂದಿ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆರಡು ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಡಿಕೆಶಿ ಪ್ಲಾನ್

