ಲಕ್ನೋ: ಸಿಬ್ಬಂದಿಯೊಬ್ಬ ಶಿಫ್ಟ್ ಮುಗಿಯಿತು ಎಂದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಗೇಟ್ ಲಾಕ್ ಮಾಡಿಕೊಂಡು ಹೊರ ನಡೆದಿರುವ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಸರ್ಕಾರಿ ಅರೋಗ್ಯ ಕೇಂದ್ರದಲ್ಲಿ ನಡೆದಿದೆ.
ಸಾನಿಯಾ(30) ಎಂಬುವರನ್ನು ಶುಕ್ರವಾರ ಮುಜಾಫರ್ ನಗರ ಜಿಲ್ಲೆಯ ಪುರ್ಕಾಜಿ ಬ್ಲಾಕ್‍ನ ಫಲೋಡಾ ಗ್ರಾಮದ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ರೋಗಿಗಳ ಕೋಣೆಯಲ್ಲಿ ಹಾಸಿಗೆಯ ಮೇಲೆ ಸಾನಿಯಾ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ವೈದ್ಯರೂ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ಕೂಡಿ ಹಾಕಿ ಹೊರಟು ಹೋಗಿದ್ದಾರೆ.
ಕೆಲ ಗಂಟೆಗಳ ನಂತರ ರೋಗಿಗೆ ಪ್ರಜ್ಞೆ ಬಂದಿದ್ದು, ತನ್ನನ್ನು ಕೂಡಿ ಹಾಕಿರುವುದನ್ನು ಕಂಡು ಭಯವಾಗಿ ಸಹಾಯ ಮಾಡುವಂತೆ ಕೂಗಿಕೊಂಡಿದ್ದಾರೆ. ಮಹಿಳೆಯ ಕೂಗನ್ನು ಕೇಳಿದ ಸ್ಥಳೀಯರು ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ, ನಂತರ ಆಕೆಯನ್ನು ಹೊರಗಡೆ ಕರೆ ತಂದಿದ್ದಾರೆ.
ಸಿಬ್ಬಂದಿ ಅಮಾನತು
ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಯ ಗ್ರೂಪ್-ಡಿ ನೌಕರನನ್ನು ಅಮಾನತುಗೊಳಿಸಲಾಗಿದೆ. ವೈದ್ಯಕೀಯ ಅಧಿಕಾರಿ ಡಾ.ಮೋಹಿತ್ ಕುಮಾರ್ ಹಾಗೂ ಮುಖ್ಯ ಫಾರ್ಮಾ ಅಧಿಕಾರಿ ಪ್ರವೀಣ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನ ವೈದ್ಯಾಧಿಕಾರಿ ಡಾ.ಪಿ.ಎಸ್.ಮಿಶ್ರಾ ತಿಳಿಸಿದ್ದಾರೆ.
ಉಪ ಪ್ರಧಾನ ವೈದ್ಯಾಧಿಕಾರಿ ಡಾ.ಬಿ.ಕೆ.ಓಝಾ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ಘಟನೆ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಿಶ್ರಾ ತಿಳಿಸಿದ್ದಾರೆ. ಸ್ಥಳೀಯರೂ ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]