ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾವೇರಿ ನೀರಿಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಬೋರ್‌ವೆಲ್ (Borewell) ಕೊರೆಯುವ ಹಾವಳಿ ಜಲಮಂಡಳಿ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ಅಂತರ್ಜಲದ ಸಮಸ್ಯೆಯಿಂದಾಗಿ ಹಿಗ್ಗಾಮುಗ್ಗ ಬೋರ್‌ವೆಲ್ ಕೊರೆಯುವವರ ಸಂಖ್ಯೆಯೂ ಹೆಚ್ಚಿದೆ. ಅನಧಿಕೃತ ಬೋರ್‌ವೆಲ್ ಕೊರೆಯುವವರಿಗೆ ಜಲಮಂಡಳಿ (BWSSB) ಬಿಗ್ ಶಾಕ್ ಕೊಡೋಕೂ ಸಜ್ಜಾಗಿದೆ.
ಹೌದು. ಬೆಂಗಳೂರಿನಲ್ಲಿ ಬೋರ್‌ವೆಲ್ ಕೊರೆಯುವ ಮುನ್ನಾ ಅನುಮತಿ ಕಡ್ಡಾಯ ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆ ಇದೆ. ಹೀಗಾಗಿ ಕಾಯುವ ತಾಳ್ಮೆ ಇಲ್ಲದೇ ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಯುವ ಸಾಹಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಜಲಮಂಡಳಿ ಈಗ ಇಂತವರಿಗೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ.
Advertisement
Advertisement
ಬೆಂಗಳೂರಿನ ಮೇಡಹಳ್ಳಿಯಲ್ಲಿ ಸಾಯಿ ಬಡಾವಣೆಯವರು ಕೂಡ ಇದೇ ಎಡವಟ್ಟನ್ನು ಮಾಡಿದ್ದಕ್ಕೆ ಜಲಮಂಡಳಿಯವರು ಈಗ ಠಾಣೆಯ ಮೆಟ್ಟಿಲೇರಿದ್ದಾರೆ. ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟು ಬೋರ್‌ವೆಲ್ ಕೊರೆಯೋದನ್ನು ನಿಲ್ಲಸಿ ಅನಧಿಕೃತವಾಗಿ ಕೊರೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸರ್ಯು ನದಿಯಲ್ಲಿ ದೋಣಿ ಮುಳುಗಿ ಇಬ್ಬರ ದುರ್ಮರಣ, 7 ಮಂದಿ ನಾಪತ್ತೆ
Advertisement
Advertisement
ಅನಧಿಕೃತವಾಗಿ ಬೋರ್‌ವೆಲ್ ಕೊರೆಯೋದ್ರಿಂದ ಅಂತರ್ಜಲ ಮಟ್ಟ ಕುಗ್ಗುವ ಆತಂಕ ಇದೆ. ಹೀಗಾಗಿ ಜಲಮಂಡಳಿ ಪೊಲೀಸರ ಅಸ್ತ್ರವನ್ನು ಬಳಸಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಯುವವರ ವಿರುದ್ಧ ಸಮರ ಸಾರಿದೆ.
Web Stories