ಹಣ ಹೊರಗಡೆ ಸಿಕ್ಕಿದ್ರೆ ಜಡ್ಜ್‌ ದುರ್ವತನೆ ಹೇಗೆ ಆಗುತ್ತೆ: ಸಿಬಲ್‌ ವಾದ

Public TV
1 Min Read
Kapil Sibal Yashwant Varma

ನವದೆಹಲಿ: ದೆಹಲಿಯ (Delhi) ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

ತಮ್ಮ ವಿರುದ್ಧ ವರದಿ ನೀಡಿದ ತ್ರಿಸದಸ್ಯ ನ್ಯಾಯಾಂಗ ಆಂತರಿಕ ಸಮಿತಿಯ ಕಾನೂನು ಬದ್ಧತೆಯನ್ನು ನ್ಯಾ ಯಶವಂತ್ ವರ್ಮಾ ಪ್ರಶ್ನೆ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಸಮಿತಿ ತನ್ನ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವವರೆಗೂ ಕಾದು ನಂತರ ಸಮಿತಿಯ ಕಾನೂನು ಬದ್ಧತೆ ಪ್ರಶ್ನಿಸಲು ಕಾರಣವೇನು ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್ ಪೀಠ ಪ್ರಶ್ನಿಸಿತು. ಇದನ್ನೂ ಓದಿ: ನಂಬರ್ ಇಲ್ಲ, ಸಂಪರ್ಕದಲ್ಲೂ ಇಲ್ಲ, ದರ್ಶನ್‌ಗೆ 100% ಜವಾಬ್ದಾರಿ ಇದೆ: ರಮ್ಯಾ

SUPREME COURT

ನ್ಯಾ. ವರ್ಮಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ (Kapil Sibal) ನ್ಯಾ. ವರ್ಮಾ ವಿರುದ್ಧ ಹಾಗೆ ಆರೋಪ ಮಾಡಲಾಗದು. ನಗದು ಹೊರಗಡೆ ಸಿಕ್ಕಿದರೆ ಅದು ನ್ಯಾಯಾಧೀಶರ ದುರ್ವರ್ತನೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿಸಿದರು.  ಇದನ್ನೂ ಓದಿ: 72 ಕೋಟಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟ ಅಭಿಮಾನಿ

ಪೊಲೀಸರು ಅಥವಾ ಆಂತರಿಕ ಸಮಿತಿಯು ನಗದು ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಿಲ್ಲ. ನ್ಯಾಯಾಧೀಶರ ವಿರುದ್ಧ ಮಾಧ್ಯಮಗಳಲ್ಲಿ ಆರೋಪ ಮಾಡುವುದು, ಸಾರ್ವಜನಿಕರ ಅವಲೋಕನಗಳು ಹಾಗೂ ನ್ಯಾಯಾಧೀಶರ ನಡೆ ಬಗ್ಗೆ ಚರ್ಚಿಸುವುದು ಎಲ್ಲವೂ ನಿಷಿದ್ಧ. ಹೀಗೆ ನಡೆಯಲು ವಿಚಾರಣಾ ಪ್ರಕ್ರಿಯೆ ಅವಕಾಶ ಮಾಡಿಕೊಟ್ಟಿದ್ದರೆ ಅದು ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಸಿಬಲ್ ವಾದಿಸಿದರು. ಕೋರ್ಟ್‌ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

Share This Article