ಭುವನೇಶ್ವರ: ಹಾಸ್ಟೆಲ್ ಕೊಠಡಿಯಲ್ಲಿ ತನಗೆ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದು 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭುವನೇಶ್ವರದ ಹಾಸ್ಟೆಲ್‌ನಲ್ಲಿ ನಡೆದಿದೆ.
ಬೋಲಂಗಿರ್ ಜಿಲ್ಲೆಯ ವಿದ್ಯಾರ್ಥಿನಿ ನಿನ್ನೆ ತಡರಾತ್ರಿ ಜಮುಕೋಲಿಯಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ತನ್ನ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ. ಇದನ್ನೂ ಓದಿ: ಪ್ಲೇಟ್‍ನಲ್ಲಿದ್ದ ಮೊಮೊಸ್ ಬೀಳಿಸಿದ್ದಕ್ಕೆ ನಡೀತು ವ್ಯಕ್ತಿ ಬರ್ಬರ ಹತ್ಯೆ
Advertisement
Advertisement
ಆತ್ಮಹತ್ಯೆ ಬಳಿಕ ವಿದ್ಯಾರ್ಥಿ ಕೋಣೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಕೆಲ ದಿನಗಳಿಂದ ಸರಿಯಾಗಿ ನಿದ್ರೆ ಬಾರದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದಿದ್ದಾಳೆ. ಅಲ್ಲದೇ ತನ್ನ ಸಾವಿಗೆ ಯಾರೂ ಕಾರಣರಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕಾಗಿ ಕುಟುಂಬದವರಲ್ಲಿ ಕ್ಷಮೆಯಾಚಿಸುತ್ತೇನೆ ಎಂಬುದಾಗಿ ಬರೆದಿದ್ದಾಳೆ.
Advertisement
ಫೋರೆನ್ಸಿಕ್ ಹಾಗೂ ಕೈಬರಹ ತಜ್ಞರು ಈ ಪತ್ರ ಯುವತಿಯೇ ಬರದಿದ್ದಾ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣವನ್ನು ಸಹಜ ಸಾವಿನ ಪ್ರಕರಣವೆಂದು ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ
Advertisement
ಏನಿದು ಸಾವಿನ ರಹಸ್ಯ?
ಕೆಲ ದಿನಗಳಿಂದ ಆಕೆ ಮಾನಸಿಕ ಒತ್ತಡದಲ್ಲಿದ್ದಳು. ಇತರರು ಮಲಗಿದ್ದಾಗ ರಾತ್ರಿಯಿಡೀ ಹಾಸ್ಟೆಲ್ ಆವರಣದಲ್ಲೇ ಸುತ್ತಾಡಿದಳು, ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಏಕೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆಕೆಯನ್ನು ಮನೆಗೆ ಕರೆದುಕೊಂದು ಹೋಗುವಂತೆ ಹಾಸ್ಟೆಲ್ ಅಧಿಕಾರಿಗಳು ಕುಟುಂಬದವರಿಗೆ ತಿಳಿಸಿದ್ದರು. ಅಷ್ಟರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಏರ್‌ಫೀಲ್ಡ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್-ಇನ್‌ಚಾರ್ಜ್ ರಾಧಾಕಾಂತ ಸಾಹು ತಿಳಿಸಿದ್ದಾರೆ.