ಗುವಾಹಟಿ: ಟೀಂ ಇಂಡಿಯಾ (Team India) ವೇಗಿ ಉಮ್ರಾನ್ ಮಲಿಕ್ (Umran Malik) ಶ್ರೀಲಂಕಾ (Sri Lanka) ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗಂಟೆಗೆ 156 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾರೆ.
ಜಮ್ಮು-ಕಾಶ್ಮೀರ ಮೂಲದ ಬೌಲರ್ ಉಮ್ರಾನ್ ಮಲಿಕ್ ತನ್ನ ವೇಗದ ಬೌಲಿಂಗ್ ಮೂಲಕ ಐಪಿಎಲ್ನಲ್ಲಿ (IPL) ಮಿಂಚಿ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಆಟಗಾರ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗಂಟೆಗೆ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದ ಉಮ್ರಾನ್ ಮಲಿಕ್, ಮಂಗಳವಾರ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗಂಟೆಗೆ 156 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಭಾರತ ವೇಗದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧ 14ನೇ ಓವರ್ ಎಸೆಯಲು ಬಂದ ಉಮ್ರಾನ್ ಮಲಿಕ್ ತನ್ನ ಸರದಿಯ ಎರಡನೇ ಓವರ್ನಲ್ಲಿ 156 ಕಿ.ಮೀ ವೇಗದ ಎಸೆತ ಎಸೆದರು. ಇದನ್ನೂ ಓದಿ: ಕೊಹ್ಲಿ ಸೆಂಚುರಿ, ರೋಹಿತ್- ಗಿಲ್ ಶತಕದ ಜೊತೆಯಾಟ – ಭಾರತಕ್ಕೆ 67 ರನ್ಗಳ ಭರ್ಜರಿ ಜಯ
ಈ ಹಿಂದೆ ಗಂಟೆಗೆ 153.36 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದ ಜಸ್ಪ್ರೀತ್ ಬುಮ್ರಾ ಭಾರತದ ವೇಗದ ಬೌಲರ್ ಎಂಬ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಇದೀಗ ಉಮ್ರಾನ್ ಮಲಿಕ್ ಈ ದಾಖಲೆಯನ್ನು ಪುಡಿಗಟ್ಟಿ ತಮ್ಮ ಹೆಸರಿನಲ್ಲಿ ನೂತನ ದಾಖಲೆ ಬರೆದಿದ್ದಾರೆ.
ಟೀಂ ಇಂಡಿಯಾ ವೇಗಿಗಳ ಪೈಕಿ ಮೊಹಮ್ಮದ್ ಶಮಿ ಅತಿ ವೇಗದ ಬೌಲಿಂಗ್ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶಮಿ ಗಂಟೆಗೆ 153.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ನವದೀಪ್ ಸೈನಿ ಗಂಟೆಗೆ 152.85 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ವೇಗದ ಬೌಲರ್ಗಳ ದಾಖಲೆಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಅಗಲಿದ ಮುದ್ದು ನಾಯಿಗೆ 47ನೇ ಅರ್ಧಶತಕವನ್ನು ಅರ್ಪಿಸಿದ ರೋಹಿತ್ ಶರ್ಮಾ
ಪಂದ್ಯದಲ್ಲಿ ಸ್ಪೀಡ್ ಎಸೆತದ ದಾಖಲೆಯೊಂದಿಗೆ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದು ಭಾರತದ 67 ರನ್ಗಳ ದೊಡ್ಡ ಮೊತ್ತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್ ಮಿಂಚಿದರೆ, ಬೌಲಿಂಗ್ನಲ್ಲಿ ಉಮ್ರಾನ್ ಮಲಿಕ್, ಸಿರಾಜ್ ಭರ್ಜರಿ ಆಟ ಪ್ರದರ್ಶಿಸಿದರು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k