ಗುವಾಹಟಿ: ವಿರಾಟ್ ಕೊಹ್ಲಿ ಶತಕ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಅರ್ಧಶತಕದಿಂದ ಶ್ರೀಲಂಕಾ (Sri Lanka) ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ (India) 67 ರನ್‌ಗಳಿಂದ ಗೆಲ್ಲುವುದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ದೊಡ್ಡ ಮೊತ್ತದ ಸವಾಲನ್ನು ಪಡೆದ ಶ್ರೀಲಂಕಾ 64 ರನ್‌ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೂ ನಾಯಕ ಶನಕ ಔಟಾಗದೇ 108 ರನ್(88 ಎಸೆತ, 12 ಬೌಂಡರಿ, 3 ಸಿಕ್ಸರ್) ಚಚ್ಚಿ ಭಾರೀ ಅಂತರದಿಂದ ಸೋಲುವುದನ್ನು ತಪ್ಪಿಸಿದರು. ಅಂತಿಮವಾಗಿ ಲಂಕಾ 8 ವಿಕೆಟ್ ನಷ್ಟಕ್ಕೆ 306 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
Advertisement
Advertisement
ಆರಂಭದಲ್ಲೇ ಅವಿಷ್ಕಾ ಫೆರ್ನಾಂಡೋ 5 ರನ್, ಕುಸಾಲ್ ಮೆಂಡಿಸ್ 0, ಚರಿತ್ ಅಸಲಂಕಾ 23 ರನ್ ಗಳಿಸಿ ಔಟಾದರು. ಆರಂಭಿಕ ಆಟಗಾರ ಪಾತುಂ ನಿಸ್ಸಾಂಕ ಮತ್ತು ಧನಂಜಯ ಡಿಸಿಲ್ವ 4ನೇ ವಿಕೆಟಿಗೆ 65 ಎಸೆತಗಳಲ್ಲಿ 72 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಆದರೆ ನಿಸ್ಸಾಂಕ 72 ರನ್(80 ಎಸೆತ, 11 ಬೌಂಡರಿ) ಧನಂಜಯ 47 ರನ್ (40 ಎಸೆತ, 9 ಬೌಂಡರಿ) ಹೊಡೆದು ಔಟಾದರು.
Advertisement
Advertisement
37.5 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿದ್ದಾಗ ಶನಕ ಮತ್ತು ಕಸುನ್ ರಜಿತಾ ಮುರಿಯದ 9ನೇ ವಿಕೆಟ್‌ಗೆ 73 ಎಸೆತಗಳಲ್ಲಿ 100 ರನ್ ಜೊತೆಯಾಟವಾಡಿದರು. ಈ ಪೈಕಿ ಶನಕ 54 ಎಸೆತಗಳಲ್ಲಿ 88 ರನ್ ಹೊಡೆದರೆ ರಜಿತಾ 19 ಎಸೆತಗಳಲ್ಲಿ 9 ರನ್ ಹೊಡೆದರು.
ಉಮ್ರಾನ್ ಮಲಿಕ್ 3, ಸಿರಜ್ 2 ವಿಕೆಟ್ ಪಡೆದರೆ ಶಮಿ, ಪಾಂಡ್ಯ, ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.
ಶತಕದ ಜೊತೆಯಾಟ:
ಭಾರತದ ಪರ ಮೊದಲ ವಿಕೆಟಿಗೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 118 ಎಸೆತಗಳಿಗೆ 143 ರನ್ ಜೊತೆಯಾಟ ನೀಡಿದರು. ಶುಭಮನ್ ಗಿಲ್ 70 ರನ್(60 ಎಸೆತ, 11 ಬೌಂಡರಿ) ಹೊಡೆದರೆ ರೋಹಿತ್ ಶರ್ಮಾ 83 ರನ್( 67 ಎಸೆತ, 9 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ಇದನ್ನೂ ಓದಿ: ಶತಕ ಹೊಡೆದು ಸಚಿನ್ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ
ವರ್ಷದ ಮೊದಲ ಏಕದಿನ ಪಂದ್ಯದಲ್ಲೇ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನು ಸರಿಗಟ್ಟಿದ್ದಾರೆ. ಏಕದಿನದಲ್ಲಿ ಕೊಹ್ಲಿ ಒಟ್ಟು 45 ಶತಕ ಹೊಡೆದಿದ್ದು ಲಂಕಾ ವಿರುದ್ಧವೇ 9 ಶತಕ ಬಾರಿಸಿದ್ದಾರೆ. 19.4 ಓವರ್‌ನಲ್ಲಿ ಎರಡನೇಯವರಾಗಿ ಕ್ರೀಸ್‌ಗೆ ಬಂದಿದ್ದ ಕೊಹ್ಲಿ ಅಂತಿಮವಾಗಿ 48.2 ಓವರ್ ತನಕ ಇದ್ದು 113 ರನ್( 87 ಎಸೆತ, 12 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು.
ಶ್ರೇಯಸ್ ಅಯ್ಯರ್ 28, ಕೆಎಲ್ ರಾಹುಲ್ 39 ರನ್ ಹೊಡೆದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು.
ರನ್ ಏರಿದ್ದು ಹೇಗೆ?
50 ರನ್ 40 ಎಸೆತ
100 ರನ್ 89 ಎಸೆತ
150 ರನ್ 125 ಎಸೆತ
200 ರನ್ 162 ಎಸೆತ
250 ರನ್ 213 ಎಸೆತ
300 ರನ್ 244 ಎಸೆತ
350 ರನ್ 280 ಎಸೆತ
373 ರನ್ 300 ಎಸೆತ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k